ಅಂಕಣಗಳು

ಯಾವ್ಯಾವ ದೇಶಗಳಲ್ಲಿ ಹಿಂದೂಗಳ ಜನಸಂಖ್ಯೆ ಎಷ್ಟಿದೆ, ಇಲ್ಲಿದೆ ಸಂಪೂರ್ಣ ಮಾಹಿತಿ.

ಜಗತ್ತಿನ ಕೆಲವೇ ಅತಿದೊಡ್ಡ ಧರ್ಮಗಳಲ್ಲಿ ಹಿಂದೂ ಧರ್ಮ ಕೂಡ ಒಂದು , ಇಂದು ಜಗತ್ತಿನಲ್ಲೇ  ಶತಕೋಟಿಗೂ ಹೆಚ್ಚು ಹಿಂದೂ ಧರ್ಮದ ಅನುಯಾಯಿಗಳಿದ್ದಾರೆ, ಹಾಗೂ ವಿಶ್ವದಾದ್ಯಂತದ ಹಿಂದೂ ಜನಸಂಖ್ಯೆಯಲ್ಲಿ 97 ಪ್ರತಿಶತದಷ್ಟು ಜನರು ಭಾರತ ಮತ್ತು ಎರಡು ನೆರೆಯ ದೇಶಗಳಾದ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಾರೆ. ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದ ಧರ್ಮ ಎಂದರೆ ಅದು ಹಿಂದೂ ಧರ್ಮ.

ಭಾರತದಲ್ಲಿನ ಹಿಂದೂಗಳು

ಪ್ರಾದೇಶಿಕವಾಗಿ  ಹಿಂದೂ ಜನಸಂಖ್ಯೆ :

973,750,000 ಹಿಂದೂ ಜನಸಂಖ್ಯೆಯೊಂದಿಗೆ ಭಾರತದಲ್ಲಿ ಹಿಂದೂಗಳು ಅಧಿಕವಾಗಿದ್ದರೂ ಶೇಕಡಾವಾರು ಪ್ರಮಾಣದಲ್ಲಿ ನೋಡಿದರೆ, ನೇಪಾಳ ಮೊದಲ ಸ್ಥಾನದಲ್ಲಿದೆ ನೇಪಾಳದಲ್ಲಿ ಪ್ರಭಾವಿ ಧರ್ಮವಾದ ಹಿಂದೂ 81.4 ಶೇಕಡಾಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ, ಭಾರತದಲ್ಲಿ ಇದು 79.4 ಶೇಕಡಾ ಇದೆ, ಅದೇ ರೀತಿ ಮಾರಿಷಸ್ ನಲ್ಲಿ ಅಲ್ಲಿನ ಜನಸಂಖ್ಯೆಗೆ ಹೋಲಿಸಿದಾಗ  48.5 ಶೇಕಡ ಹಿಂದೂಗಳಿದ್ದಾರೆ.

ಬಾಂಗ್ಲಾದೇಶ :

ಪ್ರಸಿದ್ಧ

ಬಾಂಗ್ಲಾದೇಶಿ ಹಿಂದೂಗಳು

ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರು ಭಾರತ ಮತ್ತು ಬಾಂಗ್ಲಾದೇಶಗಳಿಗೆ ರಾಷ್ಟ್ರೀಯ ಗೀತೆಗಳನ್ನು ಬರೆದಿದ್ದಾರೆ: ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮವನ್ನು ಅನುಸರಿಸುವ 12,680,000 ಜನರಿದ್ದಾರೆ. ಇಸ್ಲಾಂ ಧರ್ಮವು ರಾಷ್ಟ್ರೀಯವಾಗಿ ಬೆಂಬಲಿತ ಧರ್ಮವಾಗಿದ್ದರೂ, ಬಾಂಗ್ಲಾದೇಶ ಹಿಂದೂ ಧರ್ಮ ಮತ್ತು ಇತರ ಪಂಥಗಳಿಗೆ ಸಹಿಷ್ಣು ರಾಷ್ಟ್ರವೆಂದು ಪರಿಗಣಿಸಲಾಗಿದೆ.

ಇಂಡೋನೇಷ್ಯಾ :

ಇಂಡೋನೇಶ್ಯಾದಲ್ಲಿರುವ ಹಿಂದೂಗಳು

ಬಾಂಗ್ಲಾದೇಶದಂತೆಯೇ ಇಂಡೋನೇಷ್ಯಾದಲ್ಲಿಯೂ ಹಿಂದೂ ಧರ್ಮವನ್ನು ಅಧಿಕವಾಗಿ ಅನುಸರಿಸುತ್ತಾರೆ, 4,05,00,000 ಹಿಂದೂಗಳು ಇಂಡೋನೇಶಿಯಾದಲ್ಲಿ  ವಾಸಿಸುತ್ತಿದ್ದಾರೆ, ಇಂಡೋನೇಷ್ಯಾ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ. ಇಂಡೋನೇಷಿಯಾದ ದ್ವೀಪ ‘ ಬಾಲಿ ‘ವಿಶೇಷವಾಗಿ ಹಿಂದೂ ಧರ್ಮಕ್ಕೆ ಮುಡಿಪಾಗಿಟ್ಟಂತಿದೆ,  ಸಾಕಷ್ಟು ದೇವಾಲಯಗಳು, ಹಿಂದೂಗಳ ಪ್ರಸಿದ್ಧ ಪುರಾಣಗಳಲ್ಲಿ ವಿಜ್ಞಾನವನ್ನು ಚಿತ್ರಿಸುವ ಶಿಲ್ಪಗಳು, ಮತ್ತು ದ್ವೀಪದ ಸ್ಥಳೀಯ ಜನರ ಬಹುಪಾಲು ಜನರ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ ಹಿಂದೂ ಸಂಪ್ರದಾಯಗಳನ್ನು ಕಾಣಬಹುದು.

ಪಾಕಿಸ್ತಾನ :

ಪಾಕಿಸ್ತಾನದಲ್ಲಿರುವ ಹಿಂದೂಗಳು

ಪಾಕಿಸ್ತಾನವು 3,330,000 ಹಿಂದೂ ಭಕ್ತರ ನೆಲೆಯಾಗಿದೆ, ಮತ್ತು ಇದು ಭಾರತದ ಒಂದು ಭಾಗವಾಗಿತ್ತಾದರೂ  ವಿಭಜನೆಯ ನಂತರ ಪಾಕಿಸ್ತಾನದ ಬಹುತೇಕ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದರು,  ಪಾಕಿಸ್ತಾನ 1948 ರಲ್ಲಿ ಒಂದು ಪ್ರತ್ಯೇಕ ರಾಷ್ಟ್ರವಾಗಿ ಹೊರಹೊಮ್ಮಿತು, ಹಾಗೆಯೇ ಇಸ್ಲಾಮಿಕ್ ರಾಷ್ಟ್ರ ರೂಪಿಸುವುದಾಗಿ ಘೋಷಿಸಿತು. ನಂತರ ತಮ್ಮ ಧಾರ್ಮಿಕ ನಂಬಿಕೆಯ ಪ್ರಾದೇಶಿಕ ಆಧಾರದಲ್ಲಿ ಒಂದು ದೇಶದಿಂದ ಮತ್ತೊಂದಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ, ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆಯು ಸ್ಥಿರವಾಗಿ ಕಡಿಮೆಯಾಗುತ್ತಿದೆ, ಹಿಂದೂ ಸಂಪ್ರದಾಯದಲ್ಲಿ ತಮ್ಮ ಮಕ್ಕಳನ್ನು ಶಿಕ್ಷಣ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಪಾಕಿಸ್ತಾನದಲ್ಲಿ ಹಿಂದೂ ಪೋಷಕರು ದೂರುತ್ತಾರೆ, ಅಲ್ಲಿನ ಹೆಚ್ಚಿನ ಶಾಲೆಗಳು ಇಸ್ಲಾಮಿಕ್ ಶಿಕ್ಷಣ ಮತ್ತು ದೈನಂದಿನ ಖುರಾನ್ ಓದುವಿಕೆಗಳನ್ನು ಕಡ್ಡಾಯಗೊಳಿಸಿವೆ. ಕಳೆದ 5 ವರ್ಷಗಳಲ್ಲಿ ತಮ್ಮ ಧಾರ್ಮಿಕ ಮೂಲಗಳೊಂದಿಗೆ ಪುನರೇಕೀಕರಣಕ್ಕಾಗಿ 1,500 ಕ್ಕಿಂತ ಹೆಚ್ಚು ಪಾಕಿಸ್ತಾನದ ಹಿಂದೂಗಳಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಶ್ರೀಲಂಕಾ :

ದ್ವೀಪ ದೇಶವಾದ ಶ್ರೀಲಂಕಾ  2,830,000 ಹಿಂದೂಗಳಿಗೆ ನೆಲೆಯಾಗಿದೆ ಮತ್ತು ದೇಶದ ಪ್ರಾಚೀನ ಇತಿಹಾಸವು ಹಿಂದೂಗಳ ಪುರಾಣ ಮತ್ತು ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಪ್ರಬಲ ಹಿಂದೂ ಮೂಲದ ಸಾಮೀಪ್ಯದಿಂದಾಗಿ, ಶ್ರೀಲಂಕಾವು ಕೇವಲ ಹಿಂದೂ ದೇಶವಾಗುವ ಎಲ್ಲ ಸಾಧ್ಯತೆಗಳನ್ನು ಹೊಂದಿತ್ತು, ಆದರೆ ಶಕ್ತಿಶಾಲಿ 15 ನೇ ಶತಮಾನದ ಚಕ್ರವರ್ತಿ ಅಶೋಕ ಬೌದ್ಧ ಧರ್ಮವನ್ನು ಒಪ್ಪಿಕೊಂಡ ನಂತರ ಬೌದ್ಧ ಧರ್ಮವೂ ಶ್ರೀಲಂಕಾದಲ್ಲಿ ಅಧಿಕವಾಗಿ ಪ್ರಚಲಿತಕ್ಕೆ ಬಂತು.

ಅತಿ ದೊಡ್ಡ ಹಿಂದೂ ಜನಸಂಖ್ಯೆ ಹೊಂದಿರುವ ದೇಶಗಳು :

ಸ್ಥಾನ  ದೇಶ                        ಹಿಂದೂ ಜನಸಂಖ್ಯೆ (2010)     %

1.       ಭಾರತ                      973,750,000               79.4

2.       ನೇಪಾಳ                    24,170,000                 81.4

3.       ಬಾಂಗ್ಲಾದೇಶ             12,680,000.                  12.0

4.       ಇಂಡೋನೇಷಿಯಾ    4,050,000                     1.70

5.       ಪಾಕಿಸ್ತಾನ                 3,330,000                     1.6

6.       ಶ್ರೀಲಂಕಾ                   2,830,000.                  12.6

7.       ಯುನೈಟೆಡ್ ಸ್ಟೇಟ್ಸ್    1,790,000                    1.0

8.       ಮಲೇಷಿಯಾ              1,720,000.                  6.3

9.       ಯುನೈಟೆಡ್ ಕಿಂಗ್ಡಮ್    890,000.                  <1.5

10.     ಬರ್ಮಾ (ಮ್ಯಾನ್ಮಾರ್)   820,000                    <0.5

ಲೇಖನ ಶೇರ್ ಮಾಡಿ, ನಮ್ಮ ಸಂಪಾದಕರಿಗೆ ಪ್ರೋತ್ಸಾಹ ನೀಡಿ

  • 3
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari