ನಮ್ಮ ಸುದ್ದಿ

ಪಂಡಿತ್ ನಾಥೂರಾಮ್ ಗೋಡ್ಸೆ ತಮ್ಮ ಸಹೋದರನಿಗೆ ಬರೆದ ಕೊನೆಯ ಪತ್ರದಲ್ಲಿ ಏನು ಹೇಳಿದ್ದರು ಗೊತ್ತೇ.?

14 ನವೆಂಬರ್ 1949ರಂದು ದೇಶಭಕ್ತ ಪಂಡಿತ್ ನಾಥೂರಾಮ್ ಗೋಡ್ಸೆ ಬರೆದ ಕೊನೆಯ ಪತ್ರದಲ್ಲಿ ಅಂತದ್ದೇನಿದೆ??

ಸಹೋದರ ದತ್ತಾತ್ರೇಯ ಗೋಡ್ಸೆಗೆ ಬರೆದ ಪತ್ರ. “ನನ್ನದೊಂದು ಆಸೆಯಿದೆ. ಅದನ್ನು ನಿನ್ನ ಗಮನಕ್ಕೆ ತರಬಯಸುತ್ತೇನೆ. ನಮ್ಮ ಭರತವರ್ಷದ(ಭಾರತದ) ಸರಹದ್ದೆಂದರೆ ಸಿಂಧೂ ನದಿ. ಅದು ಪವಿತ್ರ ನದಿ. ಅದರ ದಡದ ಮೇಲೆ ಕುಳಿತೇ ನಮ್ಮ ನಾಡಿನ ಪುಣ್ಯ ಪುರುಷರು,ಋಷಿಮುನಿಗಳು ವೇದ ಬೋಧನೆ ಮಾಡಿದರು. ಮುಂದೆ ಎಂದಾದರೊಮ್ಮೆ ಮತ್ತೆ ಸಿಂಧೂ ನದಿ ಮುಕ್ತವಾಗಿ ಭರತವರ್ಷದ(ಭಾರತದ) ನೆಲದಲ್ಲಿ ಹರಿಯತೊಡಗಿದಾಗ ಅವತ್ತೇ ನನ್ನ ಚಿತಾಭಸ್ಮವನ್ನು ಒಯ್ದು ಸಿಂಧೂ ನದಿಯಲ್ಲಿ ಬೆರೆಸು. ಈ ನನ್ನ ಅಭಿಲಾಷೆ ಪೂರೈಸಲು ಒಂದೆರಡು ತಲೆಮಾರುಗಳೇ ಸರಿಯಬೇಕಾಗಬಹುದು. ನಿನ್ನ ಜೀವಿತಕಾಲದಲ್ಲಿ ಇದನ್ನು ಮಾಡಲಾಗದಿದ್ದರೆ,ನಿನ್ನ ಮಕ್ಕಳಿಗೆ ನನ್ನ ಕೊನೆ ಆಸೆ ಪೂರೈಸುವಂತೆ ಹೇಳು. ಅಲ್ಲಿಯ ತನಕ ನನ್ನ ಚಿತಾಭಸ್ಮವನ್ನು ಕಾದಿಡು”.

“ನಾನು ಪವಿತ್ರ ಭೂಮಿಯಾದ ಕುರುಕ್ಷೇತ್ರ ಮತ್ತು ಪಾಣಿಪತ್ನಿಂದ ಹೊಮ್ಮಿ ಬರುತ್ತಿರುವ ಗಾಳಿಯನ್ನು ಕೊನೆಯ ಬಾರಿಗೆ ಉಸಿರಾಡುತ್ತಿದ್ದೇನೆ. ಪಂಜಾಬ್ ಎಂಬುದು ಗುರುಗೋವಿಂದ ಸಿಂಗರ ನಾಡು. ಈ ನಾಡಿನಲ್ಲಿ ಜನಿಸಿದ ಭಗತ್,ರಾಜಗುರು ಮತ್ತು ಸುಖದೇವ್ ಮಾತೃಭೂಮಿಯ ಗರ್ಭಗುಡಿಯ ಮುಂದೆ ತಮ್ಮ ಪ್ರಾಣ ಬಲಿಕೊಟ್ಟರು. ಇಂತಹ ಫಲವತ್ತಾದ ಪವಿತ್ರ ಭೂಮಿಯಲ್ಲಿ ನಾನು ಸಾಯುತ್ತಿದ್ದೇನೆ. ಈ ನೆಲ ಲಾಲಾ ಹರದಯಾಳ್ ಮತ್ತು ದೇವತಾ ಸ್ವರೂಪ ಭಾಯಿ ಪರಮಾನಂದರಂತಹ ನಿಸ್ವಾರ್ಥಿಗಳನ್ನು ಈ ದೇಶಕ್ಕೆ ನೀಡಿದೆ. ಇಲ್ಲಿ ನಾನು ಬಲಿಯಾಗುತ್ತಿರುವುದು ನನ್ನ ಸೌಭಾಗ್ಯ”.

“ಇಂಥ ಪವಿತ್ರ ಭೂಮಿ ಪಂಜಾಬ್ ಕೂಡ ಒಂದಲ್ಲ ಒಂದು ದಿನ ಅಖಂಡ ಭಾರತ ನಿರ್ಮಾಣವಾದಾಗ ಭಾರತವನ್ನು ಕೂಡಿಕೊಂಡು ಅಖಂಡ ಪಂಜಾಬ್ ಆಗುತ್ತದೆ. ಇದು ಬೇಗ ಆಗಲಿ. ನನ್ನ ಕೊನೆಯ ಆಸೆ ಇಷ್ಟೇ”.

ಕೃಪೆ: ಗಾಂಧಿ ಹತ್ಯೆ ಮತ್ತು ಗೋಡ್ಸೆ

-ಭಗತ್ ಸಾವರ್ಕರ್

  • 3.8K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari