ಅಂಕಣಗಳು

ಟಿಪ್ಪು ಎಂಬ ಮತಾಂಧ ರಾಕ್ಷಸನ ನೈಜ ಚಿತ್ರಣ!! ಇದು ಕಾಲ್ಪನಿಕ ಕತೆಯಲ್ಲ, ಇತಿಹಾಸದಲ್ಲಿ ಮುಚ್ಚಿಹೋದ ನೈಜ ಸಾಲುಗಳು.

ಓದುವ ಹಂಬಲವಿದ್ದರೆ ಪೂರ್ಣ ಓದಿ, ಟಿಪ್ಪು ಸುಲ್ತಾನ್ ಬಗೆಗೆ ಒಂದು ನೈಜ ಚಿತ್ರಣ ನಿಮಗೆ ದೊರಕದಿದ್ದರೆ ಹೇಳಿ…!! ಇದು ಕಾಲ್ಪನಿಕ ಕಥೆಯಲ್ಲ, ಇತಿಹಾಸದಲ್ಲಿ ಮುಚ್ಚಿ ಹೋದ ಸತ್ಯದ ಸಾಲುಗಳು.. ‌.!!

ಮೈಸೂರು ರಾಜಸಂತತಿಯ 17 ನೇ ರಾಜ ಏಳನೇ ಚಾಮರಾಜ ಒಡೆಯರ್ ಆಳ್ವಿಕೆಯ ನಂತರ ಅವರ ದತ್ತು ಪುತ್ರ ಇಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಮಹಾರಾಜನಾಗಿ ಪಟ್ಟಾಭಿಷಿಕ್ತರಾಗುತ್ತಾರೆ. ಆದರೆ ಅವರ ಮರಣಾನಂತರ ನಂಜರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕವಾದರೂ ರಾಜಕೀಯ ಗೊಂದಲದ ಲಾಭ ಪಡೆಯುವ ಮೈಸೂರು ಸೇನೆಯ ಮಹಾ ದಂಡನಾಯಕನ ಸ್ಥಾನದಲ್ಲಿದ್ದ ಹೈದರ್ ಅಲಿ ತನ್ನ ಸೇನಾ ವರ್ಚಸ್ಸನ್ನು ಬಳಸಿ ಕುಟಿಲ ಬುದ್ದಿಯಿಂದ ಮೈಸೂರು ಪ್ರಾಂತದ ಅಧಿಕಾರ ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳುತ್ತಾನೆ. ಕನ್ನಡಿಗರು ಹಾಗೂ ಕನ್ನಡ ಭಾಷೆಯ ಸ್ವಾಭಿಮಾನವನ್ನು ಉಳಿಸಿ ಬೆಳೆಸಿ ಪೋಷಿಸುತ್ತಿದ್ದ ಮೈಸೂರಿನ ಮಹಾರಾಜರ ಸೇವೆಯನ್ನು ಹೀಗೆ ಹತ್ತಿಕ್ಕುವ ಹೈದರ್ ಅಲಿಯ ಮಗನಾದ ಟಿಪ್ಪು ಸುಲ್ತಾನ್ ನೇ ನಮ್ಮ ಸ್ಟೋರಿಯ ಕೇಂದ್ರಬಿಂದು. ನವೆಂಬರ್ 20, 1750ರಂದು ಇಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ್ ನ ಜನನವಾಗುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಅಂದರೆ ಬಾಲ್ಯಕಾಲದಲ್ಲೇ ತಂದೆಯ ಜೊತೆ ಯುದ್ಧಗಳಲ್ಲಿ ಭಾಗಿಯಾಗುವ ಆತ ತನ್ನ ತಂದೆಯ ಮರಣದ ನಂತರ ಸೋ ಕಾಲ್ಡ್ ದೇಶಭಕ್ತ ಟಿಪ್ಪು ಸುಲ್ತಾನ್ ಮೈಸೂರಿನ ರಾಜನಾಗುತ್ತಾನೆ. ದೇಶಭಕ್ತನೆಂಬ ಪದಕ್ಕೆ ಯೋಗ್ಯನೋ ಅಥವಾ ಅಯೋಗ್ಯನೋ ಎಂದು ಮುಂದೆ ನೀವೇ ನಿರ್ಧರಿಸಲಿದ್ದೀರಿ.. ಮುಂದೆ ಓದಿ ನೋಡಿ.‌.

ಯುದ್ಧವೆಂದರೆ ಏನು? ತನ್ನ ಮೇಲೆ ಶತ್ರುಗಳು ಮಾಡುವ ದಾಳಿಗೆ ಪ್ರತಿದಾಳಿ ಒಡ್ಡುವುದು ಅಥವಾ ತನ್ನ ರಾಜ್ಯ ವಿಸ್ತರಣೆಗಾಗಿ ಇನ್ನೊಂದು ರಾಜ್ಯದ ಮೇಲೆ ದಂಡೆತ್ತಿ ಹೋಗುವುದು ಯುದ್ಧವೆಂದು ಕರೆಸಿಕೊಳ್ಳುತ್ತದೆ. ಆದರೆ ಹೈದರ್ ಅಲಿಯಾಗಲಿ ಅಥವಾ ಟಿಪ್ಪು ಸುಲ್ತಾನನೇ ಆಗಲಿ ತನ್ನ ಉಳಿವಿಗಾಗಿ ಅಥವಾ ಅಸ್ತಿತ್ವಕ್ಕಾಗಿ ಹಾಗೂ ತಮ್ಮ ಸ್ವಾರ್ಥಗಳಿಗಾಗಿ ಹೋರಾಡಿದರೇ ವಿನಃ ದೇಶಕ್ಕಾಗಿ ಹೋರಾಡಿದರೆಂಬ ವಾದವೇ ಸುಳ್ಳು. ಇದು ಕೇವಲ ಕಟ್ಟುಕಥೆ ಅಷ್ಟೇ. ಅದಕ್ಕೆ ಕಾರಣಗಳು ಹಲವು ಇದೆ. ಅದರ ಬಗ್ಗೆ ಆಮೇಲೆ ನೋಡೋಣ.. ಟಿಪ್ಪು ರಣಹೇಡಿ ಆಗಿದ್ದ ಅನ್ನೋದಕ್ಕೆ ನಾನೊಂದು ಬಲವಾದ ಕಾರಣ ಕೊಡುತ್ತೇನೆ‌.‌. ನಿಮಗೂ ಸತ್ಯದ ಅರಿವಾಗಲಿ.

ಮೂರನೇ ಮೈಸೂರು ಯುದ್ಧದ ಸಂದರ್ಭವದು..!!
(ಬ್ರಿಟಿಷ್ ಹಾಗೂ ಮೈಸೂರು ರಾಜ್ಯಕ್ಕೂ ನಡೆದ ಸರಣಿ ಯುದ್ಧಗಳ ಪೈಕಿ ಮೂರನೆಯದು)

ನಿಮಗೊಂದು ಸತ್ಯ ಗೊತ್ತಿದೆ. ನಾವು ಭಾರತೀಯರು ಸ್ವಾಭಿಮಾನಿಗಳು, ನಮ್ಮ ವಿರುದ್ಧ ಯಾರೇ ಇದ್ದರೂ ಅವರನ್ನು ದ್ವೇಷಿಸುತ್ತೇವೆಯೇ ಹೊರತು ನಮ್ಮ ಪ್ರಾಣ ಅವರ ಪಾದದ ಅಡಿ ಬಿದ್ದು ಹೊರಳಾಡಿ ಹೋದರೂ ಅವರ ಜೊತೆ ಎಂದಿಗೂ ರಾಜಿಯಾಗುವುದಿಲ್ಲ. ಭಾರತದ ಸಂಪತ್ತನ್ನು ಕೊಳ್ಳೆಹೊಡೆಯಲು ಫ್ರೆಂಚರು, ಡಚ್ಚರು, ಬ್ರಿಟಿಷರೂ ಕೂಡ ಬಂದಿದ್ರು ನಿಜ‌. ಆದರೆ ಟಿಪ್ಪು ಬ್ರಿಟಿಷರ ವಿರುದ್ಧ ಅಷ್ಟೇ ಯುದ್ಧ ಮಾಡ್ತಾ ಇದ್ದ, ಜೊತೆಗೆ ಫ್ರೆಂಚರ ಜೊತೆ ಮೈತ್ರಿಯಾಗೇ ಇದ್ದ. ಅದಕ್ಕೆ ಕಾರಣ, ಒಬ್ಬನೇ ಎಂದಿಗೂ ಬ್ರಿಟಿಷರ ಎದುರು ಯುದ್ಧ ಮಾಡುವ ಧೈರ್ಯ ಆತನಿಗಿರಲಿಲ್ಲ, ಇನ್ನೊಬ್ಬರ ಸಹಾಯ ಪಡೆದು ಯುದ್ದ ಮಾಡುವವ ಅದೆಂಥಾ ಮಹಾನ್ ವೀರನಿರಬಹುದು ಅಲ್ಲವೇ? ಅದಿರಲಿ ಬಿಡಿ.. ಟಿಪ್ಪು ಸುಲ್ತಾನ್ ತಾನೇ ಫ್ರೆಂಚರ ಜೊತೆ ಮೈತ್ರಿಯೊಂದಿಗೆ 1789ರಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಟ್ರಾವಂಕೂರಿನ ಮೇಲೆ ದಂಡೆತ್ತಿ ಹೋಗ್ತಾನೆ. ಆದ್ರೆ ಫ್ರೆಂಚರ ವೈಫಲ್ಯಯುತ ಅಸಹಕಾರ ಹಾಗೂ ಬಲಿಷ್ಠ ಬ್ರಿಟಿಷ್ ಸೈನ್ಯದ ಕೈಗೆ ಸಿಕ್ಕ ಟಿಪ್ಪು ಸುಲ್ತಾನ್ ಸೈನ್ಯ ಪತರುಗುಟ್ಟಿ ಹೋಗುತ್ತದೆ. ಮೂರು ವರ್ಷಗಳ ಕಾಲ ನಡೆದ ಆ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ನಿಗೆ ಸೋಲಾಗುತ್ತದೆ. ಅದೇನೊ ಅಂತಾರಲ್ಲ, ಕಾಲು ಕೆರೆದು ಜಗಳ ಆಡಿ ಕಾಲು ಮುರ್ಕೊಂಡ ಅಂತ.. ಹಾಗಾಗಿತ್ತು ಟಿಪ್ಪು ಸ್ಥಿತಿ. ಸೋತ ಮೇಲೆ ಬ್ರಿಟಿಷರ ಕಾಲಿಗೆರಗಿದ ಟಿಪ್ಪು ತನ್ನ ಅಧೀನದಲ್ಲಿದ್ದ ಮಲಬಾರ್, ಸೇಲಂ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳು ಸೇರಿದಂತೆ ಅರ್ಧ ರಾಜ್ಯವನ್ನೇ ನೀಡುವ ಇಕ್ಕಟ್ಟಿಗೆ ಸಿಲುಕಿದ. ಅಷ್ಟೇ ಆದರೆ ಟಿಪ್ಪು ಬಗೆಗೆ ಬೇಸರ ಅನಿಸ್ತಿರಲಿಲ್ಲ, ಆದರೆ ಬೇಸರ ಅನಿಸೋದು ಯುದ್ಧದ ಕೊನೆಯಲ್ಲಿ ಏರ್ಪಟ್ಟ ಶ್ರೀರಂಗಪಟ್ಟಣ ಒಪ್ಪಂದದ ವಿಚಾರದಲ್ಲಿ. ಅರ್ಧ ರಾಜ್ಯ ನೀಡುವುದರ ಜೊತೆಗೆ ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಿಡಲು ಒಪ್ಪಿಕೊಂಡ ಟಿಪ್ಪು ಸುಲ್ತಾನ್ ಭಾರತದ ಇತಿಹಾಸದ ಪುಟಗಳಲ್ಲಿ ಒಂದು ಕಪ್ಪು ಚುಕ್ಕೆಯಾಗುತ್ತಾನೆ. ತನ್ನ ಅಧಿಕಾರದ ಆಸೆಗಾಗಿಯೋ ಅಥವಾ ತನ್ನ ಜೀವದ ಹಂಗಿಗಾಗಿ ತನ್ನ ಮಕ್ಕಳನ್ನೇ ಕತ್ತಲ ಕೋಣೆಗೆ ತಳ್ಳುವ ಪುಕ್ಕಲು ಮನುಷ್ಯ ಅದು ಹೇಗೆ ತಾನೆ ವೀರನಾಗುತ್ತಾನೆ? ಅದಕ್ಕೆ ನಾನು ಹೇಳಿದ್ದು ಟಿಪ್ಪು ಸುಲ್ತಾನ್ ಒಬ್ಬ ರಣಹೇಡಿ ಅಂತ…!!

ಟಿಪ್ಪು ಸುಲ್ತಾನ್ ನ ಆಡಳಿತದ ಅವಧಿ:-

ಕನ್ನಡಿಗರ ರಕ್ಷಣೆ ಹಾಗೂ ಕನ್ನಡದ ಪೋಷಣೆ ಮಾಡುತ್ತಿದ್ದ ಮೈಸೂರಿನ ಒಡೆಯರ್ ಅವರ ವಂಶದಿಂದ ಅಧಿಕಾರ ಕಿತ್ತುಕೊಂಡ ಮೇಲೆ ಹೈದರ್ ಅಲಿ ಮರಣ ಹೊಂದಿದರೂ ಟಿಪ್ಪು ಅಲ್ಲಿ ರಾಜನಾಗಿದ್ದ. ಟಿಪ್ಪು ಸುಲ್ತಾನ್ ಅಧಿಕಾರದಲ್ಲಿ ಇದ್ದಷ್ಟು ದಿನಗಳ ಕಾಲ ಬ್ರಿಟಿಷರ ವಿರುದ್ಧ ಹೋರಾಡಿದ್ದು ಕೇವಲ ಅವರು ಒಡೆಯರ್, ಮರಾಠರು ಹಾಗೂ ಹೈದರಾಬಾದ್ ನ ನಿಜಾಮರ ಜೊತೆ ಹೊಂದಾಣಿಕೆ ಇರುವ ಏಕೈಕ ಕಾರಣಕ್ಕಾಗಿ ಮಾತ್ರ. ಆತ ಯಾವಾಗಲೂ ತನ್ನ ಸ್ವ ಸಾಮರ್ಥ್ಯದಿಂದ ಬ್ರಿಟಿಷರ ವಿರುದ್ಧ ಯುದ್ಧ ಸಾರಲಿಲ್ಲ, ಬದಲಾಗಿ ತನಗಿಂತ ಸಣ್ಣ ರಾಜ್ಯಗಳ ಅದರಲ್ಲೂ ಹಿಂದೂ ರಾಜರುಗಳ ವಿರುದ್ಧವಷ್ಟೇ ಯುದ್ಧ ಸಾರುತ್ತಿದ್ದ. ತನ್ನ ವಂಶದ ಕೊಳ್ಳೆ ಹೊಡೆಯುವ ಬುದ್ದಿ, ದೇಗುಲಗಳ ನಾಶ, ಅತ್ಯಾಚಾರಗಳು ಹೀಗೆ ಸಮಾಜಘಾತುಕ ವಿಚಾರಗಳಲ್ಲಿ ಗುರುತಿಸಿಕೊಂಡನೇ ವಿನಃ ಕನ್ನಡದ ರಕ್ಷಣೆಗೆ ಅವನೆಂದೂ ದುಡಿಯಲೇ ಇಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಫಾರಸಿ ಅತ ಪರ್ಷಿಯನ್ ಭಾಷೆಯನ್ನು ತನ್ನ ಆಡಳಿತ ಭಾಷೆಯನ್ನಾಗಿಸಿದ್ದ. ತನ್ನ ರಾಜ್ಯದ ವ್ಯವಹಾರಗಳೆಲ್ಲ ಪರ್ಷಿಯನ್ ಭಾಷೆಯಲ್ಲಿಯೇ ಇರುವಂತೆ ನೋಡಿಕೊಂಡಿದ್ದ.

ಟಿಪ್ಪು ಸುಲ್ತಾನ್ ಮತಾಂಧನಾಗಿದ್ದ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ..
ಅವುಗಳ ಪೈಕಿ ಅತ್ಯಂತ ಮುಖ್ಯ ವಿಚಾರಗಳ ಬಗ್ಗೆ ಗಮನಹರಿಸೋಣ.

ಟಿಪ್ಪು ಸುಲ್ತಾನ್ ನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರನ್ನು ಬದಲಾಯಿಸಿದ್ದ. ಅವುಗಳಲ್ಲಿ ಕೆಲವು ಇಲ್ಲಿವೆ.
ಮಂಗಳೂರು- ಜಲಲಾಬಾದ್
ಮೈಸೂರು-ನಝರಬಾದ್
ಗುಟ್ಟಿ- ಫೈಜ಼್ ಹಿಸ್ಸಾರ್
ಧಾರವಾಡ-ಖುರ್ಷಿದ್ ಸವಾಡ್
ಕಣ್ಣಾನೂರು-ಕುಸನಾಬಾದ್
ದಿಂಡಿಗಲ್-ಕಲಿಖಾಬಾದ್
ರತ್ನಗಿರಿ-ಮುಸ್ತಫಾಬಾದ್
ಕಲ್ಲಿಕೋಟೆ-ಇಸ್ಲಾಮಾಬಾದ್

ಹೀಗೆ ತನಗೆ ಇಷ್ಟ ಬಂದ ಹಾಗೆ ಊರಿನ ಹೆಸರನ್ನು ಬದಲಾಯಿಸಿದ್ದ, ಆದರೆ ಆತನ‌ ಮರಣಾನಂತರ ಹಳೆಯ ಹೆಸರುಗಳೇ ಚಾಲ್ತಿಯಲ್ಲಿದೆ.

ಟಿಪ್ಪು ಸುಲ್ತಾನ್ ನ ಕಾಲದಲ್ಲಿ ಮಂಗಳೂರಿನ ಬ್ರಿಟಿಷ್ ಅಧಿಕಾರಿಯಾಗಿದ್ದ ಕರ್ನಲ್ ಫುಲ್ಲೆಟನ್ 1783ರಲ್ಲಿ ಕಲ್ಲಿಕೋಟೆಯ ಝಮೊರಿನ್ ಎಂಬ ಒಂದು ಪ್ರಾಂತ್ಯದಲ್ಲಿ ಬ್ರಾಹ್ಮಣರೇ ಅಧಿಕವಿದ್ದ ಕಡೆ ಟಿಪ್ಪುವಿನ ಸೈನ್ಯದ ಹೇಯ ಕೃತ್ಯದ ಬಗ್ಗೆ ವಿವರಿಸುತ್ತಾ ಹೇಳುತ್ತಾನೆ.. “7000 ಕುಟುಂಬವಿದ್ದ ಜಾಗದಲ್ಲಿ ಹೆಂಗಸರು ಮಕ್ಕಳೆಂದು ಕರುಣೆಯೂ ಇಲ್ಲದಂತೆ ಎಲ್ಲರನ್ನೂ ಕೊಂದು ಹಾಕಿದರು. ಹೆಂಗಸರು ಮಕ್ಕಳು ಆತನ ಸೇನೆಗೆ ಕೊರಳೊಡ್ಡಿ ಹುಳುಗಳಂತೆ ಸತ್ತರು.ಟಿಪ್ಪು ಸುಲ್ತಾನ್ ನ ಸೈನಿಕರು ಝಮೊರಿನ್ ಕೋಟೆಯ ಆಸುಪಾಸಿನಲ್ಲಿ ಪ್ರತಿದಿನ ಹತ್ತಿಪ್ಪತ್ತು ಬ್ರಾಹ್ಮಣರ ತಲೆಗಳನ್ನು ಕಡಿದು ತಂದು ನೇತು ಹಾಕುತ್ತಿದ್ದರು. ಇಲ್ಲದಿದ್ದರೆ ಕಂಡ ಕಂಡ ಗಂಡಸರನ್ನು ಹಿಡಿದು ತಂದು ಏಕಕಾಲದಲ್ಲಿ ಸಾವಿರಾರು ಜನರಂತೆ ಸಾಲಾಗಿ ನಿಲ್ಲಿಸಿ ಅವರ ಮರ್ಮಾಂಗದ ಮುಂದೊಗಲನ್ನು ಕತ್ತಿಯಿಂದಲೇ ಕೊಯ್ದು ಸಾಮೂಹಿಕ ಮುಂಜಿ ಮಾಡಿಸುತ್ತಿದ್ದರು. ನಂತರ ಮುಂಜಿಗೊಳಗಾದವರು ಇಸ್ಲಾಂ ಗೆ ಮತಾಂತರವಾದರು ಎಂದು ಘೋಷಿಸುತ್ತಿದ್ದರು‌.
ಇವರ ಉಪಟಳ ತಾಳಲಾರದೆ ಝಮೊರಿನ್ ರಾಜ ತನ್ನ ರಾಜ್ಯವನ್ನೇ ಬಿಟ್ಟು ಓಡಿ ಹೋದ.”

ಇಷ್ಟೇ ಸಾಕು,, ಅಂದರೆ ಅದ್ಯಾವ ರೀತಿ ಟಿಪ್ಪು ಕಟುಕನಾಗಿದ್ದ ಅಂತ ನಾವು ಊಹಿಸಬಹುದು..


ಮೈಸೂರು ರಾಜ್ಯಕ್ಕೆ ಭೇಟಿಕೊಟ್ಟ ಜಗತ್ಪ್ರಸಿದ್ಧ ಪೋರ್ಚುಗೀಸ್ ಯಾತ್ರಿಕ ಬಾರ್ತೊಲೋಮಿಯೋ ಡಯಾಸ್ ತನ್ನ “ವೊಯೇಜ್ ಟು ಈಸ್ಟ್ ಇಂಡೀಸ್” ಪುಸ್ತಕದಲ್ಲಿ ಈ ಕೆಳಗಿನ ಸಾಲುಗಳನ್ನು ಬರೆಯುತ್ತಾನೆ.
“ಟಿಪ್ಪು ಸುಲ್ತಾನ್ ಒಂದು ಆನೆಯ ಮೇಲೆ ಕೂತು ಸವಾರಿ ಮಾಡುತ್ತಿದ್ದ.
ಕಲ್ಲಿಕೋಟೆಯಲ್ಲಿ ಬೀಡುಬಿಟ್ಟಿದ್ದ ಟಿಪ್ಪು ಸುಲ್ತಾನ್ ನ 30,000 ಸೈನಿಕರು ಕಲ್ಲಿಕೋಟೆಯಲ್ಲಿ ಸಿಕ್ಕ ಸಿಕ್ಕ ನಾಗರೀಕರನ್ನು ನೇಣು ಬಿಗಿದು ಕೊಂದರು. ತಾಯಂದಿರ ಕೊರಳಿಗೆ ಅವರ ಮಕ್ಕಳನ್ನು ಕಟ್ಟಿ ಹಾಕಿ ಗಲ್ಲಿಗೆ ಹಾಕಲಾಯಿತು. ಕೇರಳದ ಕ್ರಿಶ್ಚಿಯನ್ ಹಾಗುಯ ಹಿಂದೂಗಳನ್ನು ನಗ್ನವಾಗಿಸಿ ಆನೆಗಳ ಕಾಲಿಗೆ ಕಟ್ಟಿ ಎಳೆಸಲಾಯಿತು. ಅವರ ದೇಹ ಛಿದ್ರವಾಗಿ ಬೇರ್ಪಡಿಸುವವರೆಗೆ ಟಿಪ್ಪು ವಿಕೃತ ವಿನೋದಾವಳಿ ಮೆರೆಯುತ್ತಾನೆ. ಕಲ್ಲಿಕೋಟೆಯ ಎಲ್ಲಾ ಚರ್ಚ್ ಹಾಗೂ ಮಂದಿರಗಳನ್ನು ಧ್ವಂಸ ಮಾಡಲಾಯಿತು. ಬದುಕುಳಿದ ಗಂಡು ಹೆಣ್ಣು ಮಕ್ಕಳಿಗೆ ಮುಸ್ಲಿಂ ಗಂಡು ಹೆಣ್ಣು ಮಕ್ಕಳ ಜೊತೆ ಬಲವಂತವಾಗಿ ಮದುವೆ ಮಾಡಿಸಲಾಯಿತು.”
ಇಷ್ಟೇ ವಿವರಣೆ ಸಾಕು ಟಿಪ್ಪು ಅದೆಷ್ಟು ಧರ್ಮಾಂಧನಾಗಿದ್ದ ಎಂಬುದಕ್ಕೆ..! ಇದಕ್ಕಿಂತ ಬೇರೆನು ಬೇಕು..!?? ಆದರೆ ಇನ್ನೂ ಪಟ್ಟಿ ಮುಗಿದಿಲ್ಲ..!

‘ಮಲಬಾರ್ ಮ್ಯಾನುಯೆಲ್’ ಎಂಬ ಗ್ರಂಥ ಬರೆದ ಬ್ರಿಟಿಷ್ ಸರ್ಕಾರದ ಸ್ಕಾಟಿಷ್ ಅಧಿಕಾರಿ ವಿಲಿಯಂ ಲೋಗನ್ ಕೇರಳದ ಸೈನಿಕರು ಟಿಪ್ಪು ಸುಲ್ತಾನನಿಗೆ ಬರೆದ ಪತ್ರಗಳ ವಿವರಗಳನ್ನು ತನ್ನ ಗ್ರಂಥದಲ್ಲಿ ಬರೆದಿದ್ದಾನೆ‌. ಅದರಲ್ಲಿ ಟಿಪ್ಪು ಸೈನಿಕರ ಭೀಭತ್ಸ ಕಾರ್ಯಗಳು ದಾಖಲಾದ ಬಗ್ಗೆ ಕಣ್ಣಾಡಿಸೋಣ..

ಕಲ್ಲಿಕೋಟೆಯಿಂದ ಇಪ್ಪತ್ತನೆಯ ಪತ್ರ ಬಂತು. ಎಂದಿನಂತೆ ಇಷ್ಟಿಷ್ಟು ಜನ ಬ್ರಾಹ್ಮಣರನ್ನು ಹಿಡಿದು ಹಾಕಲಾಯಿತು, ಅವರನ್ನು ಬಲಾತ್ಕಾರವಾಗಿ ಮುಂಜಿ ಮಾಡಿಸಿ, ದನದ ಮಾಂಸ ತಿನ್ನಿಸಿ ಮುಸಲ್ಮಾನರನ್ನಾಗಿ ಮಾಡಲಾಯಿತು. ಇಪ್ಪತ್ತನೇ ಪತ್ರದಲ್ಲಿ 200 ಬ್ರಾಹ್ಮಣರನ್ನು ಹಿಡಿದ ಬಗ್ಗೆ ವಿವರಣೆ ಇದೆ”
ಅಂದರೆ ಮತಾಂತರಕ್ಕೆ ಟಿಪ್ಪುವಿನಿಂದಲೇ ನೇರ ಕುಮ್ಮಕ್ಕು ಅಥವಾ ಆಜ್ಞೆಯೇ ಇತ್ತು. ಮತಾಂತರದ ನಂತರ ಅದರ ವಿವರಣೆ ಟಿಪ್ಪು ಗೆ ರವಾನೆಯಾಗುತ್ತಿತ್ತು. ನೂರಿನ್ನೂರು ಜನರನ್ನು ಹಿಡಿದು ಅವರಿಗೆ ಸಾಮೂಹಿಕ ಮುಂಜಿ ಮಾಡಿಸಿ ದನದ ಮಾಂಸ ತಿನ್ನಿಸುವುದು ರಾಜರೋಷವಾಗಿ ನಡೆಯುತ್ತಿತ್ತು. ಸೈನಿಕರಿಗೆ ಅದೇ ಕೆಲಸವಾಗಿತ್ತು ಎಂದರೆ ದುರುಳತನ ಮೆರೆದ ಟಿಪ್ಪುವಿನ ಬಗ್ಗೆ ಅದೆಷ್ಟು ಮೈ ಉರಿಯಲಿಕ್ಕಿಲ್ಲ ಅಲ್ವಾ?

ಅದೇ ಪುಸ್ತಕದಲ್ಲಿ ಕುಟ್ಟಿಪುರಂ ಅನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಕಡತ್ತನಾಡ್ ರಾಜವಂಶದ ಬಗ್ಗೆ ವಿವರಣೆ ಇದೆ. ನೇರ ಯುದ್ಧದಲ್ಲಿ ಉಂಟಾಗಬಹುದಾದ ಸೋಲಿಗೆ ಅಂಜಿ ಅಕ್ರಮ ಮಾರ್ಗಗಳಿಂದ ದಾಳಿ‌ಮಾಡುವ ಟಿಪ್ಪು ಅಲ್ಲಿ ಸೈನಿಕರು ಕಡಿಮೆ ಆಗುವಂತೆ ನೋಡಿಕೊಳ್ಳುತ್ತಾನೆ. ಕೊನೆಗೆ ಅಲ್ಲಿ ಕೇವಲ 2000 ನಾಯರ್ ಸೈನಿಕರು ಅಷ್ಟೇ ಉಳಿಯುತ್ತಾರೆ. ಯುದ್ಧ ಘೋಷಣೆಯಾಗಿ ಉಳಿದ 2000 ಸೈನಿಕರು ಎಷ್ಟೇ ಹೋರಾಡಿದರೂ ಟಿಪ್ಪು ಸುಲ್ತಾನ್ ನ ದೊಡ್ಡ ಸೈನ್ಯದ ಎದುರು ಸೋಲನುಭವಿಸುತ್ತಾರೆ‌‌‌. ಯುದ್ಧ ಗೆದ್ದ ಮರುದಿನ ಆ ನಾಯರ್ ಸೈನಿಕರನ್ನು ಸಾಲಾಗಿ ನಿಲ್ಲಿಸಿ ಮುಂಜಿ ಮಾಡಿಸಿ ದನದ ಮಾಂಸ ತಿನ್ನಿಸಿ ಮತಾಂತರ ಆದರೆಂದು ಘೋಷಣೆ ಮಾಡುತ್ತಾರೆ. ಆದರೆ ಧರ್ಮ ಬದಲಿಸಿ ಬದುಕಬಾರದೆಂಬ ಧೃಡ ನಿಶ್ಚಯದ ಸೈನಿಕರು ತಾವೇ ಸಾವಿಗೆ ಶರಣಾಗುತ್ತಾರೆ. ಭಾರತೀಯರೇ ಬರೆದ ಇತಿಹಾಸದಲ್ಲಿ ಎಲ್ಲೂ ಕೂಡ ಈ ವಿಚಾರ ಬಯಲಿಗೆ ಬಂದಿಲ್ಲ ಅನ್ನೋದೇ ದುರಂತ. ಇಂತಹ ಅದೆಷ್ಟೋ ಘಟನೆಗಳು ಹಿಂದೂಗಳ ಪಾಲಿಗೆ ಟಿಪ್ಪು ಸುಲ್ತಾನ್ ನ ಕರಾಳ ಆಡಳಿತದ ಕಹಿ ಘಟನೆಗಳಾಗಿ ದಾಖಲಾಗುತ್ತವೆ. ಟಿಪ್ಪು ಸುಲ್ತಾನ್ ಧರ್ಮಸಹಿಷ್ಣು ಎಂಬ ಮಾತಿಗೆ ಈ ಎಲ್ಲಾ ಘಟನೆಗಳು ಅಪವಾದವಾಗಿ ತೋರುತ್ತವೆ.

 

ಟಿಪ್ಪು ಸುಲ್ತಾನ್ ನ ಮಂಗಳೂರಿನ ಮೇಲಿನ ದಾಳಿ:-

ಮಂಗಳೂರಿನಲ್ಲೂ ಟಿಪ್ಪು ಸುಲ್ತಾನ್ ನಡೆಸಿದ ಅತ್ಯಾಚಾರಕ್ಕೆ ವಿಟ್ಲದ ಬಳಿಯ ನೆತ್ತರಕೆರೆ ಈಗಲೂ ಸಾಕ್ಷಿಯಾಗಿ ನಿಂತಿದೆ. ಬ್ರಿಟಿಷರ ಗೂಢಚಾರರು ಎಂಬ ಸಂಶಯದಿಂದ ಸುಮಾರು 60,000 ಕ್ರಿಶ್ಚಿಯನ್ನರನ್ನು ಸೆರೆಗೆ ಹಾಕಿದ‌. ಮಂಗಳೂರಿನಲ್ಲಿ ಹಿಡಿದು ಹಾಕಿದ ಕ್ರಿಶ್ಚಿಯನ್ನರ ಕೈಕಾಲುಗಳಿಗೆ ಕೋಳ ತೊಡಿಸಿ ಶ್ರೀರಂಗಪಟ್ಟಣದವರೆಗೂ ಕಾಲ್ನಡಿಗೆಯಲ್ಲಿಯೇ ನಡೆಸಿಕೊಂಡು ಹೋಗಲಾಯಿತು. ದಾರಿಯಲ್ಲಿ 4000 ಕ್ಕೂ ಅಧಿಕ ಜನ ಸತ್ತರು, ಉಳಿದವರನ್ನು ಸಾಮೂಹಿಕವಾಗಿ ಮುಂಜಿ ಮಾಡಿಸಿ ಜೈಲಿಗೆ ತಳ್ಳಲಾಯಿತು.

 

ಟಿಪ್ಪು ಸುಲ್ತಾನ್ ನಾಶಗೊಳಿಸಿದ ಹಿಂದೂ ದೇವಾಲಯಗಳ ಪಟ್ಟಿ:-

ಲೆವಿಸ್ ಬಿ.ಬೌರಿ ಎಂಬ ಬ್ರಿಟಿಷ್ ಇತಿಹಾಸ ತಜ್ಞನ ಪ್ರಕಾರ ಟಿಪ್ಪು ಸುಲ್ತಾನ್ ಮಲಬಾರ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಾಡಿದ ಅತ್ಯಾಚಾರ, ದೌರ್ಜನ್ಯಗಳನ್ನು ಭಾರತದ ಮೇಲೆ ದಾಳಿ ಮಾಡಿದ ಘಜನಿ, ಖಿಲ್ಜಿ, ಘೋರಿ ಮುಂತಾದವರಿಗೂ ಸರಿಗಟ್ಟಲು ಸಾಧ್ಯವಿಲ್ಲವಂತೆ. ಟಿಪ್ಪುವಿನ ಕಾಲದಲ್ಲಿ ಕೇವಲ ಎರಡೇ ದೇವಾಲಯಗಳು ನಿತ್ಯ ಪೂಜೆ ಹೊಂದಿದ್ದವು. ಕಾರಣ, ಜ್ಯೋತಿಷ್ಯ ಭವಿಷ್ಯವನ್ನು ಟಿಪ್ಪು ನಂಬುತ್ತಿದ್ದ.
ಚಿರಕ್ಕಲ್ ತಾಲ್ಲೂಕಿನ ತ್ರಿಚಂಬರಂ,ತಲಿಪ್ಪರಂಪು ದೇವಸ್ಥಾನಗಳು,ತಲಶ್ಶೇರಿಯ ತಿರುವೆಂಕಟರಮಣ ದೇವಸ್ಥಾನ, ಬಡಕ್ಕರ ಸಮೀಪದ ಪೊನ್ಮೇರಿ ದೇವಸ್ಥಾನ ಹಾಗೂ ಈಗಿನ ಮಣಿಯೂರು ಮಸೀದಿ ಕೂಡ ಆ ಕಾಲದಲ್ಲಿ ದೇವಾಲಯವಾಗಿತ್ತು ಎಂಬ ಬಗ್ಗೆ ದಾಖಲೆಗಳು ಇವೆ. ತಳಿ, ತಿರುವಣ್ಣೂರು, ವಾರಕ್ಕಲ್, ಪುತ್ತೂರು, ಗೋವಿಂದಪುರ ಮುಂತಾದ ಕಡೆ ನೂರಾರು ದೇವಸ್ಥಾನಗಳು ಟಿಪ್ಪು ದಾಳಿಗೆ ತುತ್ತಾದವು. ಮಧೂರಿನ ಖ್ಯಾತ ಅನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಟಿಪ್ಪು ಮಾಡಿದ ಕತ್ತಿಯ ಗುರುತು ಇಂದಿಗೂ ಹಾಗೆಯೇ ಇದೆ. ಅಷ್ಟೇ ಅಲ್ಲದೆ 1680 ರಲ್ಲಿ ಕಟ್ಟಲ್ಪಟ್ಟ ಮಿಲಾಗ್ರಿಸ್ ಚರ್ಚ್ ಕೂಡ 1784 ರಲ್ಲಿ ಟಿಪ್ಪುವಿನಿಂದ ನಾಮಾವಶೇಷವಾಯಿತು.

ಟಿಪ್ಪು ಹಾಗೂ ಆತನ ಮತಾಂಧತೆಯ ಮೌಢ್ಯ:-

ಪ್ರವಾದಿ ಮುಹಮ್ಮದರು ಹುಟ್ಟಿದ ವರ್ಷದಿಂದ ಆರಂಭಿಸಿ ಹೊಸ ಶಕೆಯೊಂದನ್ನು ದಾಖಲಿಸಿದ ಟಿಪ್ಪು ಹೊಸ ಬಗೆಯ ಪಂಚಾಂಗವನ್ನು ಜಾರಿಗೆ ತಂದ. ಭಾರತೀಯರ ಸೌರಮಾನ ಪದ್ಧತಿಯನ್ನು ಕೈಬಿಟ್ಟು ಚಾಂದ್ರಮಾನ ಪದ್ಧತಿ ಅನುಸರಿಸಲು ಆದೇಶ ಹೊರಡಿಸಿದ. ಟಿಪ್ಪು ಆರಂಭಿಸಿದ ವರ್ಷದಲ್ಲಿ 354 ದಿನಗಳಷ್ಟೇ ಇದ್ದವು. ವರ್ಷಗಳಿಗೆಲ್ಲ ಅಹಂದ್,ಅಬ್, ಝಾ, ಬಾಬ್ ಹೀಗೆ ಇಸ್ಲಾಮಿಕ್ ಹೆಸರುಗಳನ್ನು ಕೊಡಲಾಗಿತ್ತು. ದೂರವನ್ನು ಅಳೆಯುವ ಅಳತೆ ಹಾಗೂ ಮಾಪನದಲ್ಲಿಯೂ ಇಸ್ಲಾಂ ಮತವನ್ನು ತುರುಕಿದ. ಖುರಾನಿನ ಒಂದು ಸಾಲು (ಕಲ್ಮಾ) ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿದೆ ಎಂಬ ಕಾರಣಕ್ಕೆ 24 ಅಂಗುಲಗಳ ಉದ್ದವನ್ನು ಮೂಲಮಾನವಾಗಿ ಸೇರಿಸಿದ. ಹೀಗೆ ತನ್ನ ಪ್ರತಿ ನಡೆಯಲ್ಲೂ ಇಸ್ಲಾಂ ಅನ್ನು ನಾಗರಿಕರ ಮೇಲೆ ಹೇರಲು ಪ್ರಯತ್ನ ಪಟ್ಟ.

 

ಮೈಸೂರಿನ ಹುಲಿ:-

ಟಿಪ್ಪು ಸುಲ್ತಾನನಿಗೆ ಮೈಸೂರಿನ ಹುಲಿ ಬಿರುದು ಬಂದ ಬಗ್ಗೆ ಈಗಲೂ ಜಿಜ್ಞಾಸೆ ಇದೆ. ಆದರೆ ಇತಿಹಾಸಕಾರರ ಪ್ರಕಾರ ಆ ಕಾಲದಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದುದರಿಂದ ಅದನ್ನೆ ತನ್ನ ರಾಜಚಿಹ್ನೆಯಾಗಿ ಇಟ್ಟುಕೊಳ್ಳುವ ಹಂಬಲ ಹುಟ್ಟಿರಬಹುದು. ಅವನ ಕತ್ತಿಯಲ್ಲಿ ಹುಲಿಯ ಉಲ್ಲೇಖ ಇತ್ತು. ಹುಲಿಯ ಮುಖದ ಅಚ್ಚು ಇರುವ ಸಿಂಹಾಸನವನ್ನು ಆತ ಬಳಸುತ್ತಿದ್ದ. ಹುಲಿಯ ಪಟ್ಟೆಗಳ ವಿನ್ಯಾಸ ಇರುವ ಸಮವಸ್ತ್ರಗಳನ್ನು ತನ್ನ ಸೈನಿಕರಿಗೆ ಕೊಟ್ಟಿದ್ದ, ಜೊತೆಗರ ತನ್ನ ಅರಮನೆಯಲ್ಲಿ ಒಂದಿಷ್ಟು ಹುಲಿಗಳನ್ನು ಸಾಕಿದ್ದ. ಈ ಕಾರಣಗಳಿಗಾಗಿ ಆತನಿಗೆ ಶೇರ್-ಇ- ಮೈಸೂರ್ ಬಿರುದು ಬಂದಿರಬಹುದೇ ವಿನಃ ಹುಲಿಯ ಜೊತೆಗೆ ಕಾದಾಡಿದ ಎಂಬ ವಿಚಾರಗಳೇ ಸುಳ್ಳು. ಅಂತಹ ಯಾವುದೇ ವಿವರಗಳಾಗಲಿ ದಾಖಲೆಗಳಾಗಲಿ ನಮಗೆಲ್ಲೂ ಕಾಣಸಿಗುವುದೇ ಇಲ್ಲ. ಕಾರಣ.. ಅದ್ಯಾವುದೂ ನಿಜವೇ ಅಲ್ಲ‌.

ಸೇನಾನಾಯಕನ ದ್ರೋಹದೊಂದಿಗೆ ತಟ್ಟಿದ ಚಾಮುಂಡೇಶ್ವರಿಯ ಶಾಪ ಹಾಗೂ ಟಿಪ್ಪು ಸುಲ್ತಾನ್ ಅಂತ್ಯ:-

_ಇತಿಹಾಸದಲ್ಲಿ ಗುರುತಿಸಲಾದ ನಾಲ್ಕನೆಯ ಹಾಗೂ ಕೊನೆಯ ಮೈಸೂರು ಯುದ್ಧ.._

ಆಗ ತಾನೇ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಪದವಿಯು ಲಾರ್ಡ್ ಕಾರ್ನವಾಲೀಸ್ ನಿಂದ ಜನರಲ್ ಹ್ಯಾರಿಸ್ ಗೆ ಹಸ್ತಾಂತರ ಆಗಿತ್ತು.
1797 ರ ಏಪ್ರಿಲ್‌ 21ರಂದು ಪತ್ರ ಬರೆಯುವ ಟಿಪ್ಪು ಫ್ರೆಂಚರ ಬೆಂಬಲ ಸಿಕ್ಕರೆ ಬ್ರಿಟಿಷರನ್ನು ಭಾರತದಿಂದ ಓಡಿಸಿ ಇಡೀ ದೇಶವನ್ನೇ ಲೂಟಿ ಹೊಡೆಯುವ ಪ್ಲಾನ್ ಅನ್ನು ವಿವರಿಸುತ್ತಾನೆ. ಅದರಂತೆ 1798ರಲ್ಲಿ ನೆಪೋಲಿಯನ್ ಬೊನಪಾರ್ಟೆ ಭಾರತದಲ್ಲಿನ ಬ್ರಿಟಿಷರನ್ನು ಹೆದರಿಸುವ ಉದ್ದೇಶದಿಂದ ಈಜಿಪ್ಟ್‌ ಗೆ ಬರುತ್ತಾನೆ. ಆದರೆ ಅದಾಗಲೇ ‌ಬ್ರಿಟೀಷರಿಗೆ ಟಿಪ್ಪುವಿನ ಕುತಂತ್ರ ಬುದ್ದಿ ಗೊತ್ತಾಗಿರುತ್ತದೆ. ಹೊರಾಷಿಯೋ ನೆಲ್ಸನ್ನನು ನೆಪೋಲಿಯನ್ ಬೊನಪಾರ್ಟೆ ಗೆ ನೈಲ್ ಯುದ್ಧದಲ್ಲಿ ಸೋಲಿನ ರುಚಿ ತೋರಿಸಿ ಆತನನ್ನು ಜೈಲಿಗಟ್ಟುತ್ತಾನೆ. ಆದರೆ ಈ ಯುದ್ಧಕ್ಕೆ ಕಾರಣನಾದ ಟಿಪ್ಪುವಿನ ಮೇಲೆ ತಿರುಗಿಬೀಳುವ ಮೂರು ಸೇನೆಗಳು(ಒಂದು ಬಾಂಬೆ, ಎರಡು ಬ್ರಿಟಿಷ್) 1799ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕುತ್ತವೆ. ಮೇ 4 ರಂದು ಈ ಸೇನೆಯು ಕೋಟೆಯ ಒಂದು ಭಾಗವನ್ನು ಧ್ವಂಸ ಮಾಡಿ ಒಳನುಗ್ಗುತ್ತವೆ. ಆದರೆ ತಾಯಿ ಚಾಮುಂಡೇಶ್ವರಿಯ ಶಾಪ ಇಲ್ಲಿ ನಮ್ಮ ಗಮನಕ್ಕೆ ಬರುತ್ತದೆ. ಯಾವ ಹೈದರ್ ಅಲಿ ಮೈಸೂರು ರಾಜಮನೆತನಕ್ಕೆ ದ್ರೋಹ ಬಗೆದನೋ ಅದೇ ಕೆಲಸವನ್ನು ಟಿಪ್ಪು ಸುಲ್ತಾನ್ ನ ಸೇನಾಧಿಕಾರಿ ಮೀರ್ ಸಾದಕ್ ಮಾಡುತ್ತಾನೆ. ಯುದ್ಧದ ಸಂದರ್ಭದಲ್ಲಿ ತನ್ನ ಸೇನಾ ತುಕಡಿಯನ್ನು ಸಂಬಳ ಪಡೆದುಕೊಳ್ಳಲು ಕಳುಹಿಸಿ, ಆ ಮೂಲಕ ಬ್ರಿಟಿಷರು ಗೋಡೆ ಒಡೆದು ಒಳಬರಲು ಸಹಾಯ ಮಾಡುತ್ತಾನೆ. ಅಷ್ಟೇ ಅಲ್ಲ ನೆಲಮಾಳಿಗೆಯಲ್ಲಿ ಶೇಖರಿಸಿಟ್ಟ ಮದ್ದುಗುಂಡುಗಳ ಮೇಲೆ ನೀರು ಹೊಯ್ದು ಅವು ನಿರುಪಯುಕ್ತವಾಗುವಂತೆ ಮಾಡುತ್ತಾನೆ‌. ಯುದ್ಧ ಆರಂಭದಲ್ಲಿ ಆರ್ಭಟಿಸುವ ಟಿಪ್ಪು ಸುಲ್ತಾನ್ ಮುಂದೆ ಯುದ್ಧದಲ್ಲಿ ಸೋಲುವ ಭೀತಿಯೊಂದಿಗೆ ರಣಾಂಗಣ ಬಿಟ್ಟು ಓಡಲೆತ್ನಿಸಿದರೂ ವಿಫಲನಾಗಿ ಗುಂಡೇಟಿಗೆ ಬಲಿಯಾಗುತ್ತಾನೆ. ಈ ಯುದ್ಧದ ಪರಿಣಾಮವಾಗಿ ಮೈಸೂರು ಬ್ರಿಟಿಷರ ವಶಕ್ಕೆ ಬಂದಿತು ಹಾಗೂ ದೀರ್ಘ ಸಮಯದ ಬಳಿಕ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದೊಂದಿಗೆ ಒಡೆಯರ್ ವಂಶಕ್ಕೆ ಮರಳಿ ಅಧಿಕಾರ ದೊರೆಯಿತು. ಯುದ್ಧ ರಂಗದಿಂದ ಓಡಿ ಹೋಗಲು ಯತ್ನಿಸಿದ ಟಿಪ್ಪು ನಕಲಿ ಇತಿಹಾಸಕಾರರಿಂದ ಮೈಸೂರಿನ ಹುಲಿ ಅನಿಸಿಕೊಂಡಿದ್ದು ಮಾತ್ರ ವಿಪರ್ಯಾಸ..!!

ಹೈದರ್ ಅಲಿ ಹಾಗೂ ಟಿಪ್ಪುವಿನ ಆಡಳಿತ ಕಾಲದಲ್ಲಿ ಒಟ್ಟಾರೆಯಾಗಿ ಹೇಳುವುದಾದರೆ ಮುಖ್ಯ ಮಂತ್ರಿಯಾಗಿದ್ದ ದಿವಾನ್ ಪೂರ್ಣಯ್ಯ ಅವರ ಹೊರತಾಗಿ ಬೇರೆ ಯಾವುದೇ ಹಿಂದೂ ವ್ಯಕ್ತಿ ಅವರ ಕಾಲಘಟ್ಟದಲ್ಲಿ ದೊಡ್ಡ ಹುದ್ದೆ ಪಡೆಯಲೇ ಇಲ್ಲ. ಕಾರಣ ಟಿಪ್ಪುವಿಗಿದ್ದ ಮಹಾನ್ ಮತಾಂಧತೆ. ಅದು ಆತ ಹಿಂದೂಗಳ ಮೇಲೆ ವಿಧಿಸುತ್ತಿದ್ದ ಹೆಚ್ಚಿನ ತೆರಿಗೆಗಳ ಮೂಲಕವೂ ಆತನ ಧರ್ಮಾಂಧತೆ ಗೊತ್ತಾಗುತ್ತದೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು 1857 ರಲ್ಲಿ ಅಂದರೆ ಟಿಪ್ಪುವಿನ ಮರಣದ ಸರಿಸುಮಾರು ಅರ್ಧ ಶತಮಾನಗಳ ನಂತರ. ಹಾಗಾಗಿ ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಸಾಬೀತಾಗುತ್ತದೆ. ಸರ್ವ ಧರ್ಮ ಸಹಿಷ್ಣುತೆ ಮೆರೆಯದ ಟಿಪ್ಪು ಪ್ರಾಚೀನ ‌ಭಾರತದ ಮತ್ತೊಬ್ಬ ಮತಾಂಧ ಮುಸ್ಲಿಂ ರಾಜನಾಗಿದ್ದ ಅಷ್ಟೇ ಹೊರತಾಗಿ ಆತ ದೇಶಭಕ್ತನೂ ಅಲ್ಲ, ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ‌‌.

 

ತೀರ್ಮಾನ ನಿಮ್ಮ ವಿವೇಚನೆ ಹಾಗೂ ನಿಮ್ಮ ವಿಚಾರಗಳಿಗೆ ಬಿಟ್ಟದ್ದು..!!!

 

~ಪ್ರಶಾಂತ್ ರಾಜ್(ಪಚ್ಚು) ವೇಣೂರು.

  • 22
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari