ನಮ್ಮ ಸುದ್ದಿ

ಮೋದಿ ಯ ಕಾರ್ಯವೈಕರಿಗೆ ಮನಸೋತು, ಕೈ ಬಿಟ್ಟು ಕಮಲ ಹಿಡಿದ ಕರಾವಳಿಯ ಯುವಕರು

ಕಾಂಗ್ರೆಸ್ ನ ಆಧಿಕಾರದ ದಾಹಕ್ಕೆ ಅವರು ಮಾಡುತ್ತಿರುವ ಸಮಾಜ ವಿರೋಧಿ ಕೆಲಸಗಳ ಬಗ್ಗೆ ರಾಜ್ಯದಲ್ಲಿ ಬಾರಿ ಅಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದಿಂದ ಕಾಂಗ್ರೆಸ್ ಅನ್ನು ಈ ಬಾರಿ ಕಿತ್ತೋಗೆಯಬೇಕು ಎಂದು ಯುವ ಪಡೆ ಪಣತೊಟ್ಟಂತಿದೆ.

ರಾಜ್ಯದ ದುರಾಡಳಿತ ಖಂಡಿಸಿ ಕಾಪುವಿನ ಯುವಕರ ತಂಡ ಕಾಂಗ್ರೇಸ್ ಗೆ ಕೈ ಕೊಟ್ಟು ಬಿಜೆಪಿಗೆ ಜೈ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಕಾರ್ಯ ವೈಖರಿ ಮೆಚ್ಚಿ ರಾಜ್ಯದಲ್ಲಿ ಕಾಂಗ್ರೆಸ್‍ನ ದುರಾಡಳಿತ ಖಂಡಿಸಿ ಕಾಪು ಕೈಪುಂಜಾಲಿನ ಯುವಕರ ತಂಡವೊಂದು ಕಾಪು ಪುರಸಭೆ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ ಹಾಗೂ ಯೋಗಿಶ್ ಪೂಜಾರಿ ಮುಂದಾಲತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದೆ.

ಕೈಪುಂಜಾಲಿನ ರವಿ ಬಿಂದಾಸ್, ಪ್ರಸಾದ್ ಪೂಜಾರಿ , ರಾಘವೇಂದ್ರ ಅಮೀನ್, ಸುರಜ್ ಪೂಜಾರಿ, ಚರಣ್ ಪೂಜಾರಿ, ವಿಲ್ಸನ್ ಸೋನ್ಸ್, ವಿವಿನ್ ಕ್ರಿಸ್ತೋಫರ್, ವಸಂತ್ ಕಲ್ಲಿಬೈಲು, ಪ್ರಭಾನಂದ ಮಾಬಿನ್, ಸ್ಯಾಮ್‍ಸನ್,ಕೆವಿನ್ ರಿಚರ್ಡ್ , ಕೆನ್ವಿತ್ ರಿಚರ್ಡ್ ಸೇರಿದಂತೆ ಮತ್ತಿತರರಿಗೆ ಪಕ್ಷದ ಧ್ವಜ ನೀಡಿ ಸೇರ್ಪಡೆಗೊಳಿಸಲಾಯಿತು.

ಮಧ್ಯಪ್ರದೇಶದ ಸಂಸದ ಹಾಗೂ ಕಾಪು ಚುನಾವಣಾ ಉಸ್ತುವಾರಿ ಗಣೇಶ್ ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದಬೆಟ್ಟು, ಗುರ್ಮೆ ಸುರೇಶ್ ಶೆಟ್ಟಿ . ಲಾಲಾಜಿ ಆರ್ ಮೆಂಡನ್, ಯಶ್‍ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ. ಪುರಸಭಾ ಸದಸ್ಯ ಕಿರಣ್ ಆಳ್ವ ಉಪಸ್ಥಿತರಿದ್ದರು.

  • 2.1K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari