ಅಂಕಣಗಳು

ಈ ದಿನವೇ ಶಿವಾಜಿಯ ಸರ್ಜಿಕಲ್ ಸ್ಟ್ರೈಕ್ ಗೆ ಶಾಯಿಸ್ತಾಖಾನ್ ತನ್ನ ಬೆರೆಳುಗಳನ್ನು ಕಳೆದುಕೊಂಡು ಒಂದು ಲಕ್ಷ ಸೈನಿಕರೊಂದಿಗೆ ಪರಾರಿಯಾದ ದಿನವಿದು. ಇದು ಇತಿಹಾಸದ ಪುಟಗಳಲ್ಲಿ ಸೇರಿರುವ ರೋಚಕ ಘಟನೆ.

ಇಂದು ವಿರಾಟ್ ಹಿಂದೂ ಸಮ್ರಾಟ ಶಿವಾಜಿ ಮಹಾರಾಜರು ಮತಾಂಧ ಜಿಹಾದಿಗಳಿಗೆ ತನ್ನ ಚಾಣಾಕ್ಯತನದಿಂದ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರಿದ್ದ ಸೈನ್ಯವನ್ನು ದಿಕ್ಕುತೋಚದೆ ಒಡಿಹೋಗುವಂತೆ ಮಾಡಿದ ದಿನ .

ಶಿವಾಜಿ 1663 April 5 ತನ್ನ ಸೈನಿಕರೊಂದಿಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಔರಂಗಜೇಬನ ಚಿಕ್ಕಪ್ಪ ಶಾಯಿಸ್ತಾಖಾನ್ ಬೆರಳುಗಳನ್ನು ಕಳೆದುಕೊಂಡು ಅತನ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರು ರಾತ್ರೋ ರಾತ್ರಿ ಪುಣೆ ಬಿಟ್ಟು ಓಡಿ ಹೋಗಿದ್ದರು.

ಶಿವಾಜಿ ಮಹಾರಾಜರು ಔರಂಗನ ಸೇನಾಧಿಪತಿ ಅಫ್ಜಲ್ ಖಾನ್ ನ ದೇಹದಿಂದ ರುಂಡ ಬೇರ್ಪಡಿಸಿ, ತಾಯಿ ಜೀಜಾ ಮಾತೆಯ ಚರಣಗಳಿಗೆ ಅರ್ಪಿಸಿದ್ದರು. ಶಿವಾಜಿಯ ನಡೆಗೆ ಹೆದರಿದ್ದ ಔರಂಗಜೇಬ ಶಿವಾಜಿಯನ್ನು ಮುಗಿಸಲು ತನ್ನ ಚಿಕ್ಕಪ್ಪ ಶಾಯಿಸ್ತಾಖಾನ್ ನನ್ನು ಜೊತೆಗೆ ಒಂದು ಲಕ್ಷ ಸೈನಿಕರನ್ನು ಕಳುಹಿಸಿದ್ದ .

ಶಾಯಿಸ್ತಾಖಾನ್ ತನ್ನ ಒಂದು ಲಕ್ಷ ಜಿಹಾದಿ ಸೈನಿಕರ ಜೊತೆ ಹೊರಟು ಇಂದಿನ ಜೌರಂಗಬಾದ್ ತಲುಪಿದ. ತನ್ನ ಕುತಂತ್ರ ಬುದ್ಧಿಯಿಂದ ಯುದ್ಧ ಮಾಡಿ ಪುಣೆಯಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದ,ಅಷ್ಟೇ ಅಲ್ಲದೆ ಶಿವಾಜಿಯ ಲಾಲ್ ಮಹಲ್ ಅನ್ನು ವಶಪಡಿಸಿಕೊಂಡಿದ್ದ, ಇವರ ಅಕ್ರಮಣಕ್ಕೆ ಸುಮ್ಮನಿರದ ಶಿವಾಜಿ ಮಹಾರಾಜರು ಮೊಘಲರನ್ನು ಓಡಿಸಲು ಪ್ರತಿತಂತ್ರ ರೂಪಿಸಿದ್ದರು.

ತನ್ನ ರಣತಂತ್ರದಂತೆ 400 ವೀರ ಸೈನಿಕರೊಂದಿಗೆ ಶಿವಾಜಿ ವೇಷ ಬದಲಿಸಿಕೊಂಡು ಪುಣೆಯಲ್ಲಿರುವ ಲಾಲ್ ಮಹಲ್ ಪ್ರದೇಶವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು. ಲಾಲ್ ಮಹಲ್ ಮೇಲೆ ಮಂದಬೆಳಕಿನಲ್ಲಿ ಏಕಾಏಕಿಯಾಗಿ ಮುಗಿಬಿದ್ದ ಶಿವಾಜಿ ಮತ್ತವರ ಜೊತೆಗಿನ 400 ಹಿಂದೂಹುಲಿಗಳು ಮೊಘಲ್ ಸೈನಿಕರ ರುಂಡವನ್ನು ಚೆಂಡಾಡುವಲ್ಲಿ ಯಶಸ್ವಿಯಾಗಿದ್ದರು. ಶಾಯಿಸ್ತಾಖಾನ್ ನನ್ನು ಮುಗಿಸಲು ಅತ ತಂಗಿದ್ದ ಲಾಲ್ ಮಹಲ್ ಮೇಲೆ ವೀರ ಸೈನಿಕರು ಮುಗಿಬಿದ್ದದ್ದರಿಂದ ಮಹಿಳೆಯರ ಕೊಣೆಯೊಳಗಿದ್ದ ಶಾಯಿಸ್ತಾಖಾನ್ ಅಪಾಯದ ಮುನ್ಸೂಚನೆ ಕಾದಿದೆ ಎಂದು ಕಿಟಕಿ ಮೂಲಕ ಒಡಲು ಯತ್ನಿಸಿದಾಗ ವೀರ ಹಿಂದೂ ಪುತ್ರ ಶಿವಾಜಿ ಯ ಖಡ್ಗಕ್ಕೆ ಅತನ ಬೆರೆಳುಗಳು ನೆಲಕ್ಕೆ ಉರುಳಿದವು ,ಶಾಯಿಸ್ತಾಖಾನ್ ಅಲ್ಲಿಂದ ಪರಾರಿಯಾಗಿದ್ದ.

ಈ ತರಹ ಶಿವಾಜಿ 1663 ರಲ್ಲಿ ಪುಣೆಯ ಮೇಲೆ ತನ್ನ ಹಿಡಿತವನ್ನು ಮರುಸಾಧಿಸಿದರು. ಕೇವಲ 400 ಹಿಂದೂ ವೀರ ಸೈನಿಕರು ಒಂದೂ ಲಕ್ಷ ಜಿಹಾದಿಗಳನ್ನು ಸೆದೆ ಬಡಿದು ಪಾಲಾಯನಗೈಯುವಂತೆ ಮಾಡಿ ಸ್ವರಾಜ್ಯವನ್ನು ರಕ್ಷಣೆ ಮಾಡಿದ್ದ ಶಿವಾಜಿಯ ಸರ್ಜಿಕಲ್ ಸ್ಟ್ರೈಕ್ ಇಂದು ಇತಿಹಾಸವಾಗಿದೆ.

  • 2.5K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari