ಅಂಕಣಗಳು

ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಹೈಡ್ರಾಮ ಇದು. ಇವರ ನಾಟಕಕ್ಕೆ ಚಿನ್ನದ ಪದಕ ಕೊಟ್ಟರು ಕಮ್ಮಿಯೇ !

ಕಾಂಗ್ರೆಸ್ ಅನ್ನು ದೇಶದ ಬಹುದೊಡ್ಡ ನಾಟಕ ಕಂಪೆನಿ ಎಂದರೆ ಸುಳ್ಳಾಗದು. ರಾಜ್ಯದಿಂದ ರಾಜ್ಯಕ್ಕೆ ಬಣ್ಣ ಬದಲಿಸುವ ಕೈ ನಾಯಕರು ನೀರಿನ ವಿಷಯದಲ್ಲೂ ರಾಜಕೀಯ ಮಾಡುವುದನ್ನು ಬಿಟ್ಟಿಲ್ಲ.

ಮಹಾದಾಯಿ ಅಗಲಿ ಕಾವೇರಿ ಇರಲಿ ಸಮಸ್ಯೆ ಬಗ್ಗೆ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಆಸಕ್ತಿ ಇವರಿಗಿಲ್ಲ . ಮಹದಾಯಿ ವಿಷಯದಲ್ಲಿ ಹಿಂದೊಮ್ಮೆ ಸೋನಿಯಾ ಗಾಂದಿ ಗೋವಾದಲ್ಲಿ ಒಂದೂ ಹನಿ ನೀರನ್ನು ಬಿಡುವುದಿಲ್ಲ ಎಂದಿದ್ದು ನೆನಪಿರಬಹುದು , ಇತ್ತೀಚೆಗೆ ಗೋವಾದಲ್ಲಿರುವುದು ಬಿಜೆಪಿ ಸರ್ಕಾರ ಅವರು ನೀರು ಬಿಡುತ್ತಿಲ್ಲ ಎಂದು ರಾಜ್ಯದ ಕಾಂಗ್ರಸ್ಸಿಗರು ಅದನ್ನು ರಾಜಕೀಯವಾಗಿ ಬಳಸಿಕೊಂಡರು. ಅದೇನೆ ಇರಲಿ ಈಗ ಹೇಳ ಹೋರಟಿರುವುದು ಕಾವೇರಿ ನೀರಿನ ವಿಷಯ ಹಿಡಿದುಕೊಂಡು ಕಾಂಗ್ರೆಸ್ ನಡೆಸುತ್ತಿರುವ ಹೈಡ್ರಾಮದ ಬಗ್ಗೆ.

ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಕಾಂಗ್ರೆಸ್ ಪಾರ್ಟಿಗೆ ಚಿನ್ನದ ಪದಕ ಕೊಟ್ಟರು ತಪ್ಪೆನಿಲ್ಲ ಬಿಡಿ. ಈವರ ನಾಟಕ ಹೇಗಿದೆಯೆಂದರೆ ಎರೆಡು ದೋಣಿಗಳ ಮೇಲೆ ಕಾಲಿಟ್ಟಂತೆ ಒಂದೂ ಕಾಲಿಗೊಂದು ಮತ್ತೊಂದು ಕಾಲಿಗೊಂದು ದೋಣಿ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನೀರಿನ ಬಗ್ಗೆ ಬಹಳ ಹಿಂದಿನಿಂದಲು ಸಮಸ್ಯೆ ಇದೆ 60 ವರ್ಷ ದೇಶವನ್ನಾಳಿದ ಕಾಂಗ್ರಸ್ಸಿಗರು ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಲಿಲ್ಲ, ಬದಲಿಗೆ ಅದನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ.

ಮೇಲಿನ ಚಿತ್ರಗಳನ್ನು ಗಮನಿಸಿ ಎರೆಡು ಕೂಡ ಕಾಂಗ್ರಸ್ಸಿಗರದ್ದೆ ವ್ಯತ್ಯಾಸ ಇಷ್ಟೇ ಒಬ್ಬರು ತಮಿಳುನಾಡಿನವರು , ಇನ್ನೊಬ್ಬರು ಕರ್ನಾಟಕದವರು. ಒಂದೂ ಕಡೆ ಕರ್ನಾಟಕದ ಕಾಂಗ್ರೆಸ್ ನ ಸಂಸದರು ಸಂಸತ್ತಿನ ಹೊರಗಡೆ ಕಾವೇರಿ ಜಲ ನಿರ್ವಹಣಾ ಮಂಡಳಿ ಮಾಡುವುದನ್ನು ವಿರೋಧಿಸಿ ಪೋಸ್ಟರ್ ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ, ಮತ್ತೊಂದು ಕಡೆ ತಮಿಳುನಾಡಿನ ಕಾಂಗ್ರೆಸ್ ನಾಯಕರು ಮತ್ತವರ ಬೆಂಬಲಿಗರು ಕಾವೇರಿ ಜಲ ನಿರ್ವಹಣಾ ಮಂಡಳಿ ಬೇಕು ಎಂದು ರಸ್ತೆಯಲ್ಲಿ ಮಲಗಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.

ಇವರ ನಾಟಕ ನೋಡಿ ಒಂದು ಕಡೆ ವಿರೋಧ ಮತ್ತೊಂದು ಕಡೆ ಬೇಕು , ಇನ್ನೊಂದು ಕಡೆ ಕೇಂದ್ರೀಯ ಕಾಂಗ್ರೆಸ್ ನಾಯಕರು ಇವರಿಬ್ಬರನ್ನು ಪ್ರಚೋದಿಸುತ್ತಿದೆ . ನೀವು ಬೇಡ ಎನ್ನಿ ನೀವು ಬೇಕು ಎನ್ನಿ ಎಂದು, ಎರೆಡು ಕಡೆಗಳಲ್ಲೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ ಜನತೆಯನ್ನು ಮೂರ್ಖರನ್ನಾಗಿಸಿ ತನ್ನ ಓಟ್ ಬ್ಯಾಂಕ್ ಅನ್ನು ಅದಷ್ಟು ಭದ್ರಪಡಿಸಿಕೊಳ್ಳಲು ನಾಟಕವಾಡುತಿದೆ.

ಜನತೆಗೆ ಯಾವಾ ರೀತಿಯಲ್ಲಿ ಈ ಕಾಂಗ್ರಸ್ಸಿಗರು ಟೋಪಿ ಹಾಕುತ್ತಿದ್ದಾರೆ ಎಂದು ನೀವೆ ಅಲೋಚಿಸಿ ನೀವೇನು ದಡ್ಡರಲ್ಲ.ಇಂತಹ ಕಾಂಗ್ರೆಸ್ ಅನ್ನು ದೂರ ಮಾಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ.

  • 563
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari