ಅಂಕಣಗಳು

ಅಂಬೆಗಾಲಿಡುವ ವಯಸ್ಸಿನಲ್ಲಿ ಪ್ರಶಸ್ತಿ ಬಾಚಿಕೊಂಡಿರುವ ಕಲಾಸಾಧಕಿ.

ಬಹುಮುಖ ಪ್ರತಿಭೆ ಸಾಕ್ಷಿ ಕಲಾಸಾಧನೆಯ ಕುರಿತಾಗಿ ಕಿರುನೋಟ ವಿವಿಧ ಕಲಾಕ್ಷೇತ್ರದ ಮೂಲಕ ಚಿರಪರಿಚಿತಳಾದ ಸಾಕ್ಷಿಯ ಈಗಿನ ವಯಸ್ಸು 9 ವರ್ಷ . ದಾಮೋದರ ಪೂಜಾರಿ ಶೋಭಾಾ ದಂಪತಿಗಳ ಮುದ್ದಿನ ಮಗಳಾಗಿರುವ ಈಕೆ ತನ್ನ ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ 7 ತಿಂಗಳ ಮಗುವಿರುವಾಗಲೇ ಗುರುಪುರ ಜಂಗಮಮಠದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪ್ರತಿಭಾವಂತೆ.

ಅಲ್ಲಿಂದ ನಿರಂತರ 8 ವರ್ಷಗಳಲ್ಲಿ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಇವಳ ಪಾಲಿಗೆ ದೊರೆತಿದೆ. ಈಕೆ ನೃತ್ಯದಲ್ಲಿ ಮಾತ್ರವಲ್ಲದೇ,ಇನ್ನಿತರ ಆಟೋಟ ಸ್ಪರ್ಧೆಗಳಲ್ಲೂ ಇವಳದೇ ಮೇಲುಗೈ. ಅದಲ್ಲದೆ ಸಂಗೀತ, ಭಾಷಣ ಸ್ಪರ್ಧೆ, ಛದ್ಮವೇಷ ಶಾಲೆಯಲ್ಲಿ ಯಾವ ಸ್ಪರ್ಧೆ ಇದ್ದರು, ಇವಳದೇ ಹೆಸರು.

ಇಂತಹ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅದೇಷ್ಟೋ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ ಈ ಪೋರಿ.. ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ಈಕೆ 2011-12 ರಲ್ಲಿ ಸುಧಾವಾಹಿನಿ ಕಲಾಕೇಂದ್ರ ಬೆಂಗಳೂರು ಇವರು ನಡೆಸಿದ ನೃತ್ಯ ಸ್ಪರ್ಧೆಯಲ್ಲಿ “ಪುಟ್ಟಣ್ಣ ಕಣಗಲ್ ಪ್ರಶಸ್ತಿ” ಲಭಿಸಿದೆ. 2014 ಸವದತ್ತಿಯಲ್ಲಿ “ಇಂಡಿಯನ್ ಫ್ರೀ ಸ್ಟೈಲ್ ಗ್ರೂಪ್ ಡ್ಯಾನ್ಸ್ ಕಾಂಪಿಟೇಷನ್” ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳಿಸಿದ್ದಾಳೆ. ಇವಳ ಮುದ್ದು ಪ್ರತಿಭೆಯನ್ನು ಕಂಡು ಅದೆಷ್ಟೋ ಪ್ರತಿಷ್ಠಿತ ಸಂಘ ಸಂಸ್ಥೆಗಳು ಸನ್ಮಾನದ ಮೂಲಕ ಪ್ರೋತ್ಸಾಹ ನೀಡಿದ್ದಾರೆ.

ಮಂಗಳೂರಿನ ಸಿಟಿ ಸೆಂಟರ್ನಲ್ಲಿ ನಡೆದ “ಡ್ಯಾನ್ಸ್ ಮಸ್ತಿ” ಪ್ರೋಗ್ರಾಮ್ ನಲ್ಲಿ ದ್ವೀತಿಯ ಬಹುಮಾನ ಪಡೆದಿದ್ದಾಳೆ. ಅದಲ್ಲದೇ ಮಂಗಳೂರು, ಬೆಂಗಳೂರು, ಗುಲ್ಬರ್ಗ, ಮೈಸೂರು, ಮಡಿಕೇರಿ, ಕೇರಳ, ಹಾಸನ, ಧರ್ಮಸ್ಥಳ ಹೀಗೆ ಮುಂತಾದ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಅದಲ್ಲದೇ 2015-16 ರಲ್ಲಿ ಸ್ಪಂದನ ವಾಹಿನಿಯಲ್ಲಿ ನಡೆಸಿದ “ಡ್ಯಾನ್ಸ್ ಸೂಪರ್ ಸ್ಟಾರ್” ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನ ಪಡೆದಿದ್ದಾಳೆ.

ಹೀಗೆಯೇ ಈಕೆ ಇನ್ನಿತರ ಹಲವು ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದ್ದಾಳೆ. “ಬೆಳೆಯುವ ಸಿರಿ ಮೊಳಕೆಯಲ್ಲಿಯೇ” ಎಂಬಂತೆ ಈಕೆ ಭವಿಷ್ಯದ ದಿನಗಳಲ್ಲಿ ಉತ್ತಮ ಹೆಸರನ್ನು ಗಳಿಸಲಿ. ಈಕೆ ವಿದ್ಯಾಜ್ಯೋತಿ ಶಾಲೆ ವಾಮಂಜೂರು ಇಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. 2017 ರಲ್ಲಿ ರಾಜ್ಯ ಮಟ್ಟದ ಗೌರವ ಪ್ರಶಸ್ತಿ , ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿಯನ್ನು ಪಡೆದಿರುವ ಈಕೆ ವಿವಿಧ ಕಲಾಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲ್ಲಿಯೆಂದು ನಾವೆಲ್ಲರೂ ಆಶಿಸೋಣ. ಲೇಖನ- ಸ್ವಾತಿ ಅಂಚನ್‌.

  • 2
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari