ಅಂಕಣಗಳು

ಸಿದ್ದರಾಮಯ್ಯನ ಹಿಂದೂ ವಿರೋಧಿ ನೀತಿಗಳು: ಸಿದ್ದರಾಮಯ್ಯನವರೆ ನೀವು ಮರೆತರೂ ನಾವು ಮರೆತಿಲ್ಲ..

ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿಗಳು.
1. ಅಧಿಕಾರಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆ ವಾಪಾಸ್. ಅಧಿಕಾರದ ಗದ್ದುಗೆ ಹಿಡಿದ ಕೂಡಲೇ , ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತರಬೇಕೆಂದಿದ್ದ ಸಂಪೂರ್ಣ ಗೋಹತ್ಯೆ ನಿಷೇಧ ವಿಧೇಯಕ ವಾಪಾಸ್ ಪಡೆದು ಹಿಂದುಗಳ ಭಾವನೆಯನ್ನು ಲೆಕ್ಕಿಸಿರುವುದಿಲ್ಲ. ಈ ವಿಧೇಯಕವನ್ನು ಅಂದಿನ ಬಿಜೆಪಿ ಸರಕಾರ ಸದನಗಳಲ್ಲಿ ಮಂಡಿಸಿ , ರಾಜ್ಯಪಾಲರ ಅನುಮೋದನೆಗೆ ಬಾಕಿ ಇತ್ತು. 2.ಆರ್.ಎಸ್.ಎಸ್ ಹಾಗೂ ವಿಹಿಂಪ ವಿರುದ್ಧ ಹೋರಾಡಿ ಎಂಬ ಹೇಳಿಕೆ. ಆಕ್ಟೋಬರ್ 30, 2015ರಂದು ಬೆಂಗಳೂರಿನಲ್ಲಿ ನಡೆದ ಯವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಾ , ರಾ.ಸ್ವ.ಸಂ , ವಿಹಿಂಪ ಹಾಗು ಬಜರಂಗದಳದ ವಿರುದ್ಧ ಹೋರಾಡಿ ಎಂದು ಬಹಿರಂಗವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು. 3 ಜೈಲುಪಾಲಾದ ಅಲ್ಪಸಂಖ್ಯಾತರನ್ನು ಮಾತ್ರ ರಕ್ಷಿಸಲು ಆಯೋಗ ರಚನೆಗೆ ಚಿಂತನೆ. ವಿವಿಧ ಪ್ರಕರಣಗಳಲ್ಲಿ (ಕ್ರಿಮಿನಲ್ ಪ್ರಕರಣಗಳನ್ನು ಒಳಗೊಂಡಂತೆ) ಭಾಗಿಯಾಗಿ ಜೈಲು ಸೇರಿರುವ ಅಲ್ಪಸಂಖ್ಯಾತರಿಗೆ ಮಾತ್ರ ಉಚಿತ ಕಾನೂನು ಸಲಹೆ ನೀಡಲು ಆಯೋಗ ರಚನೆ ಮಾಡುವುದಕ್ಕೆ ಮುಂದಾಗಿರುವುದನ್ನು ಸಚಿವ ರಮೇಶ್ ಕುಮಾರ್ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು.

4. ಗಣೇಶೋತ್ಸವ ಹಾಗೂ ಹಿಂದುಗಳ ಹಬ್ಬಗಳಿಗೆ ಅಡ್ಡಿ , ಬಾಂಡ್ ನೀಡಲು ತಾಕೀತು. ಪೊಲೀಸ್ ಇಲಾಖೆಯನ್ನು ಅತ್ಯಂತ ದುರುಪಯೋಗಪಡಿಸಿಕೊಂಡ ಸಿದ್ದರಾಮಯ್ಯನವರು ಹಿಂದುಗಳ ಎಲ್ಲಾ ಹಬ್ಬ ಆಚರಣೆಗಳಿಗೆ ತೊಡಕು ಉಂಟು ಮಾಡಿದ್ದರು. ಹಲವೆಡೆ ಗಣೇಶ ಹಾಗು ಶ್ರೀ ರಾಮನವಮಿ ಆಚರಣೆಗೆ 10ಲಕ್ಷ ಬಾಂಡ್ ನೀಡಲು ಪೊಲೀಸ್ ಇಲಾಖೆ ತಾಕೀತು ಮಾಡಿತ್ತಾದರೂ , ಸಾರ್ವಜನಿಕರ ಆಕ್ರೋಶಕ್ಕೆ ಭಯಭೀತರಾಗಿ ನಿರ್ಧಾರವನ್ನು ವಾಪಾಸ್ ಪಡೆದರು. 5 ಬಾಂಗ್ಲಾದೇಶದ ನುಸುಳುಕೋರರಿಗೆ ಬೆಂಬಲ / ಮುಸಲ್ಮಾನ ತುಷ್ಟೀಕರಣ.ರಾಜ್ಯದಲ್ಲಿ ಅಕ್ರಮ ವಲಸೆಗಾರರ ಬಗ್ಗೆ ಸರಕಾರಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೇ , ಬಾಂಗ್ಲಾದೇಶಿಯರಿಗೂ ಆಧಾರ್ / ಚುನಾವಣಾ ಗುರುತಿನ ಚೀಟಿಯನ್ನು ನೀಡಲಾಗಿದೆ. 6 ಜಾತಿ ಗಣತಿಯಲ್ಲಿ ತಾರತಮ್ಯ, ಹಿಂದುಗಳ ವಿಂಗಡಣೆ.ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸರಕಾರದ ಹಣದ ದುಂದುವೆಚ್ಚ ಮಾಡಿ ಜಾತಿ ಗಣತಿ ಮಾಡಲಾಗಿದೆ. ಇದು ಹಿಂದು ಸಮಾಜವನ್ನು ಜಾತಿ ಜಾತಿಗಳಾಗಿ ಒಡೆಯುವ ನೀತಿ. 7 ಹಿಂದು ಪರ ಶಾಲೆಗಳ ಅನುದಾನ ವಾಪಾಸ್ – ಕಲ್ಲಡ್ಕ ಶಾಲೆ. ಹಿಂದು ಪರ / ಸ್ವಯಂ ಸೇವಕರು ನಡೆಸುತ್ತಿದ್ದ ಶಾಲೆಯೆಂಬ ಒಂದೇ ಕಾರಣಕ್ಕೆ ಮೂಕಾಂಬಿಕೆ ದೇವಾಲಯದಿಂದ ನೀಡುತ್ತಿದ್ದ ಬಿಸಿಯೂಟ /ಅನುದಾನವನ್ನು ರದ್ದು ಪಡಿಸಿದ್ದು.

8. ಹಿಂದು ಪರ ಕಾರ್ಯಕರ್ತರ ಕೊಲೆಗಳ ಬಗ್ಗೆ ಮೌನ / ತನಿಕೋಡು ಚೆಕ್ ಪೋಸ್ಟ್‌ನಲ್ಲಿ ಹತ್ಯೆಯಾದ ಕಬೀರ್‍ಗೆ ಹತ್ತು ಲಕ್ಷ . ರಾಜ್ಯದಲ್ಲಿ ಇದುವರೆಗೂ ನಡೆದಿರುವ 25+ಕ್ಕೂ ಹೆಚ್ಚು ಹಿಂದು ಸಂಘಟನೆಯ ಕಾರ್ಯಕರ್ತರ ಕೊಲೆಗಳ ಬಗ್ಗೆ ಮೌನ ವಹಿಸಿದ್ದು. ತನಿಕೋಡು ಚೆಕ್ ಪೊಸ್ಟ್ ನಲ್ಲಿ ಎ.ಎನ್.ಎಫ್ ಯೋಧರ ಗುಂಡೇಟಿಗೆ ಬಲಿಯಾದ ಗೋಕಳ್ಳ ಕಬೀರ್ ಗೆ 10ಲಕ್ಷ ನೀಡಿದ್ದು , ಅಮಾಯಕ ಹಿಂದೂ ಕಾರ್ಯಕರ್ತರ ಕುಟುಂಬಕ್ಕೆ ಸಾಂತ್ವನವೂ ಸಹ ಹೇಳದಿರುವುದು. 9 ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಗಳ ನಂತರ ಬೇಜವಾಬ್ದಾರಿ ಹೇಳಿಕೆ / ತನಿಖೆಯಲ್ಲಿ ಹಸ್ತಕ್ಷೇಪ. ರಾಜ್ಯದಲ್ಲಿ ಆಗಿರುವ ಹಿಂದು ಕಾರ್ಯಕರ್ತರ ಕೊಲೆಗಳ ಬಗ್ಗೆ ಮೌನ ವಹಿಸಿದ್ದಲ್ಲದೇ , ಎಲ್ಲಾ ಕೊಲೆಗಳು ಸಹಜ ಸಾವು ಎಂದು ಮುಖ್ಯಮಂತ್ರಿಗಳೇ ಸ್ವತಃ ಘೋಷಿಸಿದ್ದು , ಎಲ್ಲಾ ತನಿಖೆಗಳ ದಿಕ್ಕು ತಪ್ಪಿಸಲು ಒತ್ತಡ ಹೇರಿದ್ದು.

10. ಅಕ್ರಮ ಕಸಾಯಿಖಾನೆಗಳಿಗೆ ಬೆಂಬಲ ಹಾಗೂ ಅನುದಾನ. ರಾಜ್ಯದಲ್ಲಿ ಕೆಲವೇ ಅನುಮತಿ ಪಡೆದ ಕಸಾಯಿಖಾನೆಗಳಿದ್ದರೂ , ಅವ್ಯಾಹತವಾಗಿ ಅಕ್ರಮ ಕಸಾಯಿಖಾನೆಗಳು ಸಿದ್ದರಾಮಯ್ಯನವರ ಕೃಪೆಯಿಂದ ಕಾರ್ಯ ನಿರ್ವಹಿಸುತ್ತಿದೆ. 11 ಇಸ್ಲಾಂ ವಿರೋಧವಿದ್ದರೂ ಟಿಪ್ಪು ಜಯಂತಿ ಆಚರಣೆ/ ಕೋಮುಗಲಭೆ. ಜಯಂತಿ ಹಾಗು ಜನ್ಮದಿನದ ಆಚರಣೆಗಳು ಇಸ್ಲಾಂ ವಿರೋಧಿಯಾಗಿದ್ದರೂ ಕೇವಲ ಮುಸಲ್ಮಾನ ವೋಟ್‌ಬ್ಯಾಂಕ್ ಮನವೊಲಿಸಲು ಟಿಪ್ಪು ಜಯಂತಿ ಆಚರಣೆಯ ಘೋಷಣೆ / ರಾಜ್ಯದಾದ್ಯಂತ ಹಿಂದುಗಳು ಹಾಗೂ ಕ್ರಿಶ್ಚಿಯನ್ನರ ವಿರೋಧದ ನಡುವೆಯೂ ಮುಂದುವರೆಸಿರುವುದು. 12 ಪಿ,ಎಫ್.ಐ ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧದ ಕೇಸುಗಳನ್ನು ಹಿಂಪಡೆದಿರುವುದು. ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಇದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಾಸ್ ಪಡೆದಿರುವುದಲ್ಲದೇ ಅವರ ಬೆಂಬಲಕ್ಕೆ ನಿಂತಿರುವುದು.

13. ಶಾಲಾ ಮಕ್ಕಳ ಮನಸಲ್ಲೂ ವಿಷ ಬೀಜ ಬಿತ್ತುವ ಅಹಿಂದ ಪ್ರವಾಸ. ಅಲ್ಪಸಂಖ್ಯಾತ ಹಾಗೂ ಅಹಿಂದ ಮಕ್ಕಳಿಗೆ ಮಾತ್ರ ಶಾಲಾ ಪ್ರವಾಸ ಘೋಷಿಸಿದ್ದ ಸರಕಾರ . 14 ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ / ಸುಳ್ಳು ಕೇಸ್. ಹಿಂದೂ ವಿರೋಧಿ ಧೋರಣೆಯನ್ನೇ ಘನತೆಯಾಗಿಸಿಕೊಂಡಿರುವ ಸಿದ್ದರಾಮಯ್ಯನವರು ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯ ಕರ್ತರನ್ನೇ ಸುಳ್ಳು ಕೇಸುಗಳನ್ನು ಹೂಡಲು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿರುವುದು. ಮಂಗಳೂರಿನಲ್ಲಿ ಸಚಿವ ರಮಾನಾಥ ರೈ ಎಸ್.ಪಿ ಜೊತೆ ಮಾತನಾಡಿರುವುದೇ ಇದಕ್ಕೆ ಸಾಕ್ಷಿ.

15. ಹಿಂದೂ ವಿರೋಧಿ ಸ್ವಯಂ ಘೋಷಿತ ಬುದ್ಧಿ ಜೀವಿಗಳಿಗೆ ಪ್ರೋತ್ಸಾಹ. ಹಿಂದು ವಿರೋಧಿ ಹೇಳಿಕೆಗಳನ್ನು ನೀಡಿ ಬುದ್ಧಿಜೀವಿಗಳು ಎಂದು ಸ್ವಯಂ ಘೋಷಿಸಿಕೊಂಡಿರುವ ಅಯೋಗ್ಯರಿಗೆ ನೇರ ಬೆಂಬಲ ಸರ್ಕಾರ ನೀಡುತ್ತಿರುವುದು. ಇಂತಹ ಹೇಳಿಕೆಗಳನ್ನು ನೀಡುವವರಿಗೆ ಸರಕಾರದಲ್ಲಿ ಅತ್ಯುನ್ನತ ಸ್ಥಾನ ನೀಡುತ್ತಿರುವುದು. 16 ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾದಿ ಭಾಗ್ಯ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಶಾದಿ ಭಾಗ್ಯ ಘೋಷಿಸಿದ್ದು . 17 ಮಕ್ಕಳ ಸ್ಕಾಲರ್‌ಶಿಪ್‌ನಲ್ಲೂ ತಾರತಮ್ಯ , ಅಲ್ಪಸಂಖ್ಯಾತರಿಗೆ ಹೆಚ್ಚು ಪ್ರೋತ್ಸಾಹ ಧನ. 18 ಹಿಂದೂ ಮಠಗಳಿಗೆ ಅನುದಾನ ಕಟ್ / ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳಿಗೆ ಅನುದಾನ. ಹಿಂದಿನ ಬಿಜೆಪಿ ಸರಕಾರ ಸೇವೆಯಲ್ಲಿ ತೊಡಗಿರುವ ದೇವಾಲಯಗಳಿಗೆ ಹಾಗೂ ಮಠಗಳಿಗೆ ನೀಡುತ್ತಿದ್ದ ಅನುದಾನಗಳನ್ನು ಕಡಿತಗೊಳಿಸಿರುವುದು. ಹಿಂದೂ ದೇವಾಲಯಗಳಿಂದ ಬಂದ ಹಣವನ್ನು ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಆರಾಧನಾ ಯೋಜನೆಯಡಿ ಮಂಜೂರು.

19. ಮಸೀದಿ ಚರ್ಚ್‌ಗಳಿಗೆ ಹೆಚ್ಚು ಅನುದಾನ , ದೇವಾಲಯಗಳ ನಿರ್ಲಕ್ಷ್ಯ. ಹಿಂದು ದೇವಾಲಯಗಳಿಂದ ಬಂದ ಹಣದ ಬಹುಪಾಲನ್ನು ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಆರಾಧನಾ ಯೋಜನೆಯಡಿ ಮಂಜೂರು. 20 ಸಂಸ್ಕೃತ ಪಾಠ ಶಾಲೆಗಳಿಗೆ ಅನುದಾನ ಕಡಿತ / ಮದರಸಾಗಳಿಗೆ ಹೆಚ್ಚಿನ ಅನುದಾನ. ಆಗಮ ಶಾಲೆಗಳಿಗೆ 25 ಲಕ್ಷ , ಮದರಾಸಾಗಳಿಗೆ 5 ಕೋಟಿ ಅನುದಾನ! 21 ದಸರಾ ಅನುದಾನ ಕಡಿತ / ದಸರಾ ಆಚರಣೆಯಲ್ಲಿ ಅಡ್ಡಿ. ನಾಡ ಹಬ್ಬ ದಸರಾ ಆಚರಣೆಯಲ್ಲೂ ಹಸ್ತಕ್ಷೇಪ , ಅನುದಾನ ಕಡಿತ ಹಾಗೂ ಹಿಂದೂ ವಿರೋಧಿತನವನ್ನು ಪ್ರದರ್ಶಿಸಿದವರಿಂದ ದಸರಾ ಉದ್ಘಾಟನೆ.

22. ಅದ್ದೂರಿಯ ನಾಡ ಹಬ್ಬ ದಸರಾ ಆಚರಣೆಗೆ ಬ್ರೇಕ್ / ಟಿಪ್ಪು ಜಯಂತಿಗೆ 12 ಕೋಟಿ ಅನುದಾನ. ನಾಡ ಹಬ್ಬ ದಸರಾ ಆಚರಣೆಯನ್ನು ಸಾಮಾನ್ಯವಾಗಿ ಆಚರಣೆ , ಟಿಪ್ಪು ಜಯಂತಿಗೆ ಕೋಟಿ ಕೋಟಿ ಅನುದಾನ, ಬಹಳ ವಿಜೃಂಭಣೆಯಿಂದ ಆಚರಣೆ.23. ದೇವಾಲಯಗಳು ಹಾಗೂ ಮಠಗಳ ಆಡಳಿತದಲ್ಲಿ ಹಸ್ತಕ್ಷೇಪ / ಹಿಂದುಗಳ ಭಾವನೆಗೆ ಧಕ್ಕೆ. ದೇವಾಲಯಗಳನ್ನು ಹಾಗೂ ಮಠಗಳನ್ನು ಸರಕಾರದ ವಶಕ್ಕೆ ಪಡೆಯುವ ತಂತ್ರ / ಕೆಲವು ದೇವಾಲಯಗಳಲ್ಲಿ ಆಡಳಿತಾಧಿಕಾರಿ ನೇಮಕ. 24. ಈದ್ ಮಿಲಾದ್ ಆಚರಣೆಗೆ ಬೆಂಬಲ / ಹಿಂದು ಹಬ್ಬಗಳಿಗೆ ಅಡ್ಡಿ. 25 ವಿಧಾನಸೌಧದಲ್ಲಿ ಪೂಜೆ , ಪುನಸ್ಕಾರಕ್ಕೆ ಅಡ್ಡಿ (ಆಂಜನೇಯ) 26. ಜಾತಿಗಳ ಮಧ್ಯೆ ವೈಷಮ್ಯ ಬಿತ್ತುವ ಕಾಂಗ್ರೆಸ್ / ಹಿಂದು ಸಮಾಜದ ಒಗ್ಗಟ್ಟನ್ನು ಛಿದ್ರಗೊಳಿಸುವ ತಂತ್ರ.

  • 675
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari