ನಮ್ಮ ಸುದ್ದಿ

56 ಇಂಚಿನ ಮೋದಿಯನ್ನು ಎದುರಿಸಲು ಸರ್ಕಾರಿ ಖಜಾನೆ ಯಿಂದ 56 ಕೋಟಿ ಖರ್ಚು‌ ಮಾಡಿದ ಸಿದ್ದರಾಮಯ್ಯ

ಕೆಲವೊಮ್ಮೆ ಸಂಖ್ಯೆಯು ಕೆಲವೊಂದು ಸ್ವಾರಸ್ಯಕರ ವಿಷಯವನ್ನು ಉಂಟು ಮಾಡುತ್ತದೆ. ಕಾಕತಾಳೀಯವಾಗಿ ಆರ್.ಟಿ.ಐ ಮೂಲಕ ವ್ಯಕ್ತಿಯೊಬ್ಬರು ಕರ್ನಾಟಕ ಸರಕಾರ ಮಾಧ್ಯಮ ಪ್ರಚಾರಕ್ಕೆ ಬಳಸುತ್ತಿರುವ ಹಣದ ಬಗ್ಗೆ ಮಾಹಿತಿಯನ್ನು ಕೇಳಿ ಅರ್ಜಿ‌ ಸಲ್ಲಿಸಿದ್ದರು. ಆರ್.ಟಿ.ಐ ಮೂಲಕ ಬಹಿರಂಗವಾದ ಸ್ವಾರಸ್ಯಕರ ಹಾಗೂ ಆಘಾತಕಾರಿ ವಿಷಯವೆಂದರೆ, ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಬಿಜೆಪಿಯ ಅಲೆಯನ್ನು ಎದುರಿಸಲು ರಾಜ್ಯದ ಮಾಧ್ಯಮ ಸಂಸ್ಥೆಗಳಿಗೆ ಜಾಹಿರಾತು ನೀಡಲು ಕಳೆದ ಮೂರು ತಿಂಗಳಲ್ಲಿ ಖರ್ಚು ಮಾಡಿದ್ದು ಒಟ್ಟು 56 ಕೋಟಿ ರೂಪಾಯಿ. ಜನರನ್ನು ಸೆಳೆಯಲು ಕಳೆದ ಮೂರು ತಿಂಗಳಲ್ಲಿ ಜಾಹೀರಾತಿಗಾಗಿ ಮಾತ್ರ ಖರ್ಚು ಮಾಡಿದ್ದು ಸುಮಾರು 56 ಕೋಟಿ ರೂಪಾಯಿ ಎಂಬ ಆಘಾತಕಾರಿ ವಿಷಯ ಆರ್.ಟಿ.ಐ ನಿಂದ ಬಹಿರಂಗವಾಗಿದೆ. ಸ್ವಾರಸ್ಯಕರ ವಿಷಯವೇನೆಂದರೆ, 56 ಇಂಚ್ ಅಂತ ಮೋದಿಯನ್ನು ತಮಾಷೆ ಮಾಡುತ್ತಿದ್ದ ಕಾಂಗ್ರೆಸ್ ಈಗ ಅದಕ್ಕೆ ಸಮವಾದ 56 ಕೋಟಿಯನ್ನು‌ ಪ್ರಚಾರಕ್ಕೆ ಮಾತ್ರ ಸರಕಾರಿ ಬೊಕ್ಕಸದಿಂದ ಭರಿಸುತ್ತಿದೆ.

ಐದು ವರ್ಷದಲ್ಲಿ ಕಾಂಗ್ರೆಸ್ ಸರಕಾರ ಮಾಡಿರುವ ಸಾಧನೆಗಳನ್ನು ಕೇವಲ ಮೂರು ತಿಂಗಳಲ್ಲಿ ಜನರಿಗೆ ತಿಳಿಸಲು ಸಿದ್ದರಾಮಯ್ಯ ಸರ್ಕಾರ ಮಾಡಿರುವ ಈ ದುಬಾರಿ ಖರ್ಚು ಹಲವು ಅನುಮಾನಗಳನ್ನು ಮೂಡಿಸಿದೆ. 56 ಎದೆಯಿಂಚಿನ ನರೇಂದ್ರ ಮೋದಿ ಕರ್ನಾಟಕಕ್ಕೆ ಪ್ರಚಾರಕ್ಕೆ ಬರುವರು ಎಂಬ ಭೀತಿಯಿಂದ ರಾಜ್ಯ ಸರ್ಕಾರ ಈ ಮಟ್ಟಕ್ಕೆ ಹಣ ಖರ್ಚು ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವರು ಬರುವುದರೊಳಗೆ ಸರಕಾರದ ಸಾಧನೆಗಳ ಹೆಸರಿನಲ್ಲಿ ಪ್ರಚಾರ‌ ನಡೆಸಿ‌ ಜನರ ಹಣವನ್ನು‌ ಲೂಟಿ ನಡೆಸಿದ್ದಾರೆ.

ಮಾಹಿತಿ ಹಕ್ಕಿನಡಿ ದೊರಕಿರುವ ಉತ್ತರದ ಪ್ರಕಾರ, ಇಲಾಖಾವಾರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ, ಮತ ಪಡೆಯುವ ಹುನ್ನಾರವಂತು ಸ್ಪಷ್ಟವಾಗಿ ಗೋಚರಿಸುತ್ತದೆ. ಚುನಾವಣೆಯ ಹೊತ್ತಿನಲ್ಲಿ ಇದು ನಡೆದಿರುವುದು ಅನುಮಾನಕ್ಕೆಡೆಮಾಡಿದೆ. ಮಾಧ್ಯಮಗಳು, ಆಟೋ, ಬಸ್‌ಗಳ ಮೇಲೆ ಪೋಸ್ಟರ್, ಎಲ್.ಇ.ಡಿ, ಮೊಬೈಲ್ ವ್ಯಾನ್ ಗಳು, ಎಲ್.ಇ.ಡಿ ಹೋಲ್ಡಿಂಗ್ಸ್, ಬಿ.ಬಿ.ಎಂ.ಪಿ ಕಂಬಗಳನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದು, ಜನರ ಹಣವನ್ನು ಬೇಕಾಬಿಟ್ಟಿಯಾಗಿ ಪ್ರಚಾರಕ್ಕೆ ಬಳಸಿದ್ದಾರೆ.

ಸಚಿವರಾದ ಎಂ.ಬಿ ಪಾಟೀಲ್ ಮತ್ತು ಕೆ.ಜೆ.ಜಾರ್ಜ್ ಒಂದು ಹೆಜ್ಜೆ ಮುಂದು ಹೋಗಿ ಡಿಜಿಟಲ್ ಪ್ರಚಾರ ಕೈಗೊಂಡರು. ಟಿವಿಗಳಿಗೂ ಜಾಹಿರಾತು ನೀಡಿದ್ದರು. ಇವರು ಪ್ರತ್ಯೇಕವಾಗಿ ಇಲಾಖಾವಾರು ಹಣ ಬಳಸಿಕೊಂಡಿದ್ದಾರೆ.
ಡಿಸೆಂಬರ್ 1ರಿಂದ ಮಾರ್ಚ್ 20ರವರೆಗೆ ಅಂದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವವರೆಗೆ ರಾಜ್ಯ ಸರ್ಕಾರ ಒಟ್ಟು 56 ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿದೆ.

ಜನರ ದುಡ್ಡಿನಲ್ಲಿ ತಮ್ಮ ಪ್ರಚಾರ ನಡೆಸುವುದು ಎಷ್ಟು ಸರಿ. ಬಡವರ ಪರವಿರುವ ಸರಕಾರವೆಂದು ಜನರ ತೆರಿಗೆ ದುಡ್ಡಿನಲ್ಲಿ‌ ಬಿಟ್ಟಿ ಪ್ರಚಾರ ನಡೆಸಿ ದುಡ್ಡನ್ನು ದುರುಪಯೋಗ ಪಡಿಸುವುದು ಎಷ್ಟು ಸರಿ? ಸರಕಾರದ ಸಾಧನೆಗಳು ಯಾವುದೂ ಜನರಿಗೆ ತಲುಪಿಲ್ಲವೆಂಬುದು ಇದರಿಂದ ತಿಳಿಯುತ್ತದೆ. ಇಲ್ಲದಿದ್ದರೆ 56 ಕೋಟಿ ಖರ್ಚು ಮಾಡುವ ಔಚಿತ್ಯವೇನು? ನೇರವಾಗಿ ಅಭಿವೃದ್ಧಿಯನ್ನು ಮುಂದಿರಿಸಿ ಚುನಾವಣೆಯನ್ನು ಎದುರಿಸಲಾಗದ ಸಿದ್ದರಾಮಯ್ಯ, ಜನರ ದುಡ್ಡಿನಲ್ಲಿ ಪ್ರಚಾರ ನಡೆಸುವುದು ಎಷ್ಟು ಸರಿ.

  • 634
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari