ನಮ್ಮ ಸುದ್ದಿ

ಕರಾವಳಿಯಲ್ಲಿ ಧರ್ಮಯುದ್ಧಕ್ಕೆ ಕಾರಣವಾದ ಕಾಂಗ್ರೆಸ್-ಎಸ್ ಡಿ ಪಿ ಐ ಮಹಾಮೈತ್ರಿ

ಈ ಬಾರಿಯ ಚುನಾವಣೆಯು ರಮಾನಾಥ ರೈ ಗೆ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯ ಹಿಂದೂ‌ ಕಾರ್ಯಕರ್ತರ ಹತ್ಯೆ, ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸಿದ ಪ್ರಕರಣ ಮೊದಲಾದ ವಿಷಯಗಳಿಂದ ಹಿಂದೂ ಸಮಾಜದ ಆಕ್ರೋಷಕ್ಕೆ ಸಚಿವ ರೈ ಒಳಗಾಗಿದ್ದಾರೆ. ಪ್ರಸ್ತುತ ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಜೊತೆ ಹಿಂದೂ ಸಮಾಜ ಒಗ್ಗಾಟ್ಟಾಗಿ ನಿಂತಿರುವುದು ಬಂಟ್ವಾಳದ ಕೈ ಮುಂಖಂಡ ರಮನಾಥ್ ರೈ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಇದರಿಂದ ಎಸ್ ಡಿ ಪಿ ಐ ಜೊತೆ ಮೈತ್ರಿ ಮಾಡಿಕೊಂಡಿದೆ. ಇದರ ಹಿಂದೆ ಕೋಟಿಗಳ ಡೀಲ್ ನಡೆದಿದೆಯೆಂಬ‌ ಮಾತುಗಳು‌ ಕೇಳಿ ಬಂದಿದೆ. ಟಿ.ವಿ ಚಾನೆಲ್ ಚರ್ಚೆಯೊಂದರಲ್ಲಿ ಹಾವು ಮುಂಗುಸಿಯಂತೆ ಕಚ್ಚಾಡಿದ್ದ ಎಸ್.ಡಿ.ಪಿ.ಐ ಹಾಗೂ‌ ಕಾಂಗ್ರೆಸ್ ಈಗ ಗಳಸ್ಯ ಕಂಠಸ್ಯ ಎಂಬ ರೀತಿಯಲ್ಲಿ ಕೋಮುವಾದಕ್ಕಾಗಿ ಒಂದಾಗಿದ್ದೇವೆಂದು ಹೇಳುತ್ತಿದ್ದಾರೆ.

ಕರಾವಳಿಯಲ್ಲಿ ಹಿಂದೂ ಯುವಕರ ಕೊಲೆಗಳ ಹಿಂದೆ ಎಸ್ ಡಿ ಪಿ ಐ ನೇರ ಕೈವಾಡವಿರುವುದು ಸಾಬೀತಾಗಿತ್ತು. ಹಿಂದೂ ಯುವಕರನ್ನು ಹೇಗಾದರೂ ಮಟ್ಟ ಹಾಕಬೇಕು ಎಂದು ರಾಷ್ಟ್ರೀಯ ಪಕ್ಷ ಮುಸ್ಲಿಂ ಮತಗಳು ವಿಭಜನೆ ಯಾಗದಂತೆ ಎಸ್ ಡಿ ಪಿ ಐ ಜೊತೆ ಮೈತ್ರಿ ಮಾಡಿಕೊಂಡಿದೆ. ಇದು ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು ಕಾಂಗ್ರೆಸ್‌ನಲ್ಲಿರುವ ಒಂದು ವಿಭಾಗವು ಈ ಒಪ್ಪಂದವನ್ನು ವಿರೋಧಿಸುತ್ತಾರೆ.

ಬಂಟ್ವಾಳದಲ್ಲಿ ಮಾತ್ರವಲ್ಲದೆ; ಮಂಗಳೂರು ಉತ್ತರ, ಸುಳ್ಯದಲ್ಲಿಯೂ ಮುಸ್ಲಿಂ ಮತ ವಿಭಜನೆ ಆಗದಂತೆ ಕಾಂಗ್ರೆಸ್ ರಣ ತಂತ್ರ ರೂಪಿಸಿದೆ ಎಂದು ತಿಳಿದು‌ ಬಂದಿದೆ. ಅಧಿಕಾರಕ್ಕೋಸ್ಕರ ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂದು, ಕಾಂಗ್ರೆಸ್‌ನಲ್ಲಿರುವ ಹಿಂದುಗಳು ಅರಿತರೆ ಉತ್ತಮ. ಹಿಂದೂ‌ ಕಾರ್ಯಕರ್ತರ ಬಲಿದಾನ ವ್ಯರ್ಥವಾಗದಿರಲಿ.

  • 648
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari