ನಮ್ಮ ಸುದ್ದಿ

ಕರಾವಳಿಯ ಹಿಂದೂ ಲೇಡಿ ಫೈರ್ ಬ್ರಾಂಡ್ ಕಂಡರೆ ಮತಾಂಧರಿಗೆ ಅಷ್ಟೊಂದು ಕೋಪ ಯಾಕೆ ಗೊತ್ತೆ?

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ನಾರಿ..! ಮುಸ್ಲಿಂ ಶಾಸಕನ ಬಗ್ಗೆ ಈ ಫೈರ್ ಬ್ರಾಂಡ್ ಗೆ ಅಷ್ಟೊಂದು ಕೋಪ ಯಾಕೆ ಗೊತ್ತಾ..?! ಹಿಂದೂ ಧರ್ಮದ ವಿಚಾರವಾಗಿ ಮಾತನಾಡಿದರೆ ಸಾಕು ಅಂತವರನ್ನು ಕೋಮುವಾದಿಗಳು ಎಂದು ಕರೆಯಲಾಗುತ್ತದೆ. ಅಂತವರ ವಿರುದ್ಧ ಬೇಕಾಬಿಟ್ಟಿ ಮಾತನಾಡಲಾಗುತ್ತದೆ. ರಾಜ್ಯ ಸರಕಾರವೂ ಹಿಂದೂ ವಿರೋಧಿ ನೀತಿ ಅನುಸರಿಸಿಕೊಂಡು ಬಂದಿರುವುದರಿಂದ , ಹಿಂದೂ ಧರ್ಮದ ನಿಂದನೆ ಬಹಳ ರಾಜಾರೋಷವಾಗಿ ನಡೆಯುತ್ತಿದೆ. ಧರ್ಮ ಪ್ರೇಮದಿಂದ ಮಾತನಾಡಿದರೆ ಸಾಕು ಅಂತವರನ್ನು ಕುಗ್ಗಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಅಂತಹ ಒಂದು ಘಟನೆ ನಡೆದಿರುವುದು ಕರಾವಳಿಯ ಹಿಂದೂ ಕಾರ್ಯಕರ್ತೆಯ ವೇಳೆ. ಇಡೀ ಕರಾವಳಿಯಲ್ಲಿ ಸಂಚರಿಸಿ ಜಿಹಾದಿಗಳ ವಿರುದ್ಧ ತನ್ನ ಪ್ರಖರವಾದ ಮಾತಿನ ಮೂಲಕವೇ ಝಾಡಿಸಿದ್ದ ದುರ್ಗಾ ವಾಹಿನಿ ಕಾರ್ಯಕರ್ತೆ ಚೈತ್ರ ಕುಂದಾಪುರ ಅವರ ವಿರುದ್ಧ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಅಸಹ್ಯವಾಗಿ ಬರೆದು ಹರಿಯಬಿಟ್ಟಿದ್ದಾರೆ.

ಜಿಹಾದಿಗಳಿಗೆ ಛಾಟಿ ಏಟು ನೀಡುತ್ತಿದ್ದ ,ಹಿಂದೂ ಲೇಡಿ ಫೈರ್ ಬ್ರಾಂಡ್..! ಉತ್ತರ ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಹಿಂದುತ್ವದ ವಿಚಾರವನ್ನು ಎಲ್ಲೆಡೆ ಪಸರಿಸಿ , ಜಿಹಾದಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಈ ಹುಡುಗಿಗೆ ಬೆದರಿಕೆ ಬರುತ್ತಿರುವುದು ಇದೇ ಮೊದಲೇನಲ್ಲಾ. ಹಿಂದೂ ಧರ್ಮದ ಪರವಾಗಿ , ಹಿಂದೂ ಧರ್ಮದ ವಿರೋಧಿಗಳಿಗೆ ತನ್ನ ಪ್ರಖರ ಮಾತುಗಳಿಂದಲೇ ಛಳಿ ಬಿಡಿಸಿದ್ದ ಈಕೆಗೆ ಇದೀಗ ಹೊಸ ಸವಾಲೊಂದು ಎದುರಾಗಿದೆ. ಚುನಾವಣಾ ಸಂದರ್ಭದಲ್ಲಿ ಬಲಪಂಥೀಯರ ಪರವಾಗಿ ಏನಾದರೊಂದು ಹೇಳಿಕೆ ನೀಡಿದರೆ ಸಾಕು ರಾಜ್ಯ ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ತಕ್ಷಣ ಅಂತವರನ್ನು ಬಂಧಿಸಿ ಹಿಂಸೆ ನೀಡುತ್ತದೆ.

ಆದರೆ ಹಿಂದೂಗಳ ವಿರುದ್ಧ ಯಾರೇ ಏನೇ ಹೇಳಿಕೆ ನೀಡಿದರೂ ಅಂತವರನ್ನು ಪೋಷಿಸುವಂತಹ ಕೆಲಸದಲ್ಲಿ ರಾಜ್ಯ ಸರಕಾರ ತೊಡಗಿದೆ. ತನ್ನ ಬೆಂಕಿಯಂತಹ ಮಾತುಗಳಿಂದಲೇ ಹಿಂದೂ ಕಾರ್ಯಕರ್ತರನ್ನು ಒಗ್ಗೂಡಿಸುತ್ತಾ ಇಡೀ ಕರ್ನಾಟಕದಾದ್ಯಂತ ಸಂಚರಿಸುತ್ತಿರುವ ಚೈತ್ರ ಕುಂದಾಪುರ ರಿಗೆ ಕೆಲ ಮಂದ ಮನಸ್ಥಿತಿಯ ಜಿಹಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಫೋಟೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಫೇಸ್‌ಬುಕ್‌ ವಾಟ್ಸಾಪ್ ಗಳಲ್ಲಿ ಚೈತ್ರ ಕುಂದಾಪುರ ಅವರ ಫೋಟೋಗಳನ್ನು ವೇಶ್ಯಾವಾಟಿಕಯಲ್ಲಿ ತೊಡಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ‌. ಅನೇಕ ಬಾರಿ ಚೈತ್ರ ಕುಂದಾಪುರ ರಿಗೆ ಗಲ್ಫ್ ರಾಷ್ಟ್ರಗಳಿಂದಲೂ ಬೆದರಿಕೆ ಕರೆಗಳು ಬಂದಿದ್ದು, ಕೊಲ್ಲುವುದಾಗಿ ಮತ್ತು ಮಾನಭಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಯಾವ ಬೆದರಿಕೆಗಳಿಗೂ ಜಗ್ಗದ ಚೈತ್ರ ಮಾತ್ರ ತನ್ನ ಧರ್ಮ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. ಇದರಿಂದ ಧೃತಿಗೆಟ್ಟ ಜಿಹಾದಿಗಳು ಇದೀಗ ಇಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ. ಚೈತ್ರ ಕುಂದಾಪುರ ದುರ್ಗಾವಾಹಿನಿ ಸಂಘಟನೆಯ ಸಕ್ರಿಯ ಕಾರ್ಯಕರ್ತೆ ಆಗಿದ್ದು, ಹಣದ ಅವಶ್ಯಕತೆ ಇರುವುದರಿಂದ ಮುಸ್ಲಿಂ ಯುವಕನೊಂದಿಗೆ ಕಾಮದಾಟ ನಡೆಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ’ ಎಂದು ವಾಟ್ಸಾಪ್, ಫೇಸ್‌ಬುಕ್‌ ಗಳಲ್ಲಿ ಜಿಹಾದಿಗಳು ಸುಳ್ಳು ಸುದ್ಧಿ ರವಾನಿಸಿದ್ದಾರೆ. ಈ ಸಂದೇಶ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ , ಮುಖಂಡರಿಗೆ ಸಿಗುತ್ತಿದ್ದಂತೆ ತಕ್ಷಣ ಪೊಲೀಸರಿಗೆ ದೂರು ನೀಡಿ , ಸುಳ್ಳು ಸುದ್ದಿ ಹಬ್ಬಿಸಿ ಒಂದು ಹೆಣ್ಣಿನ ಮಾನ ಮರ್ಯಾದೆ ಕೆಡಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹಿಂದೂಗಳಿಗೆ ಒಂದು ನ್ಯಾಯ, ಜಿಹಾದಿಗಳಿಗೆ ಒಂದು ನ್ಯಾಯ..! ರಾಜ್ಯದ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎಂದರೆ ಹಿಂದೂಗಳು ನೆಮ್ಮದಿಯಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಒಂದೆಡೆ ಹಿಂದೂ ಕಾರ್ಯಕರ್ತರ ಕೊಲೆ, ಇನ್ನೊಂದೆಡೆ ಹಿಂದೂ ಧರ್ಮದ ಬಗ್ಗೆ ಮಾತನಾಡುವವರ ಮೇಲೆ ಸುಳ್ಳು ಆರೋಪ ಮಾಡಿ ಅವರ ಆತ್ಮ ಸ್ಥೈರ್ಯ ಕುಗ್ಗಿಸುವ ಕುತಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂಬುದು ಸ್ಪಷ್ಟ. ಅದೇ ರೀತಿ ಚೈತ್ರ ಅವರಿಗೂ ಇಂತಹ ಬೆದರಿಕೆ ನೀಡಿ ಅವರನ್ನು ಈ ಧರ್ಮ ಕಾರ್ಯದಿಂದ ಹಿಂದೆ ಸರಿಸುವ ಕೆಲಸವನ್ನು ಕಾಣದ ಕೈಗಳು ನಡೆಸುತ್ತಿದೆ. ಕಾಂಗ್ರೆಸ್ ಐಟಿ ಸೆಲ್ ಕೈವಾಡ..!ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಫೇಕ್ ನ್ಯೂಸ್ ಶೇರ್ ಆಗುತ್ತಿರುವುದು ಹೆಚ್ಚಾಗುತ್ತಿದೆ. ಯಾಕೆಂದರೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ. ಮುಖ್ಯಸ್ಥೆ ರಮ್ಯಾ ಇತ್ತೀಚೆಗೆ ತನ್ನ ಐಟಿ ಸೆಲ್ ಕಾರ್ಯಕರ್ತರಿಗೆ ಫೇಕ್ ಖಾತೆ ತೆರೆದು ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ವಿರುದ್ಧ ಮೆಸೆಜ್ ಶೇರ್ ಮಾಡುವಂತೆ ಸೂಚನೆ ನೀಡಿದ್ದಳು. ಅದೇ ಕಾರಣದಿಂದ ದಿನದಿಂದ ದಿನಕ್ಕೆ ಇಂತಹ ಫೇಕ್ ಮೆಸೆಜ್ ಗಳು ಹರಿದಾಡುತ್ತಲೇ ಇದೆ.

ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಚೈತ್ರ , ವಾಟ್ಸಾಪ್- ಫೇಸ್‌ಬುಕ್‌ ಗಳಲ್ಲಿ ಕೆಲವೊಂದು ಗೊಂದಲ ಸೃಷ್ಟಿಸುವ ಪೋಸ್ಟ್ ಗಳು ಹರಿದಾಡುತ್ತಿದೆ. ಆದರೆ ನನಗೆ ಅಂತಹ ಯಾವುದೇ ದಾರಿದ್ರ್ಯ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಇಲಿಯಾಸ್ ಎಂಬ ಜಿಹಾದಿಯ ಮೇಲೆ ಕೇಸ್ ದಾಖಲಿಸಲಾಗಿದೆ. ಈ ಸುದ್ದಿಯ ಮೂಲ ಗಂಗಾವತಿ ಎಂದು ತಿಳಿದುಬಂದಿದೆ. ಆದರೆ ಮಂಗಳೂರು ಮತ್ತು ಉಡುಪಿಯ ಭಾಗದ ಮುಸ್ಲೀಮರ ಮೂಲಕ ಕಾಂಗ್ರೆಸ್ ಐಟಿ ಸೆಲ್ ಸಹಾಯದಿಂದ ಈ ರೀತಿ ಸುಳ್ಳು ಸುದ್ಧಿ ಹಬ್ಬಿಸಲಾಗುತ್ತಿದೆ. ೨೦೧೫ ರಲ್ಲಿ ನಡೆದ ಒಂದು ಘಟನೆಗೆ ನನ್ನ ಫೋಟೋ ಸೇರಿಸಿ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.! ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಾರಿ..! ಈ ರೀತಿಯ ಘಟನೆಗಳು ಚೈತ್ರ ಕುಂದಾಪುರ ಅವರಿಗೆ ಹೊಸದೇನಲ್ಲಾ, ಏಕೆಂದರೆ ಹಿಂದೂ ಧರ್ಮದ ಬಗ್ಗೆ ಮಾತನಾಡಲು ಪ್ರಾರಂಭಿಸಿದ ದಿನದಿಂದಲೂ ಜಿಹಾದಿಗಳಿಂದ ಮತ್ತು ಕಾಂಗ್ರೆಸಿಗರಿಂದ ಇಂತಹ ಬೆದರಿಕೆಗಳು ಬರುತ್ತಲೇ ಇದೆ. ಆದರೆ ಇತ್ತೀಚೆಗೆ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಚೈತ್ರ ಮತ್ತು ಹಿಂದೂ ಪರ ಸಂಘಟನೆಗಳು ಸರಕಾರಕ್ಕೆ ನೇರ ಎಚ್ಚರಿಕೆ ನೀಡಿದೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುವವರನ್ನು ಏನೂ ಮಾಡದ ಸರಕಾರ , ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡುವಂತಹ ಚೈತ್ರ ಕುಂದಾಪುರರಂತವರನ್ನು ಕುಗ್ಗಿಸುವ ಕೆಲ ಮಾಡುತ್ತಿದೆ.

ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಈ ಹಿಂದೆಯೂ ನನ್ನ ವಿರುದ್ಧ ಭಾರೀ ಹೇಳಿಕೆ ನೀಡುವ ಮೂಲಕ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಇಂತಹ ಯಾವುದೇ ಘಟನೆಯಿಂದ ನಾನು ವಿಚಳಿತಳಾಗುವುದಿಲ್ಲ ಎಂದು ಹೇಳಿದ ಚೈತ್ರ , ಚುನಾವಣೆಗಾಗಿ ಇಕ್ಬಾಲ್ ಅನ್ಸಾರಿ ಅವರು ಮಾಡುವ ಎಲ್ಲಾ ಕುತಂತ್ರಗಳು ಅವರಿಗೇ ತಿರುಗುಬಾಣವಾಗಲಿದೆ ಎಂದು ಹೇಳಿದರು. ಹಿಂದೂ ಸಂಘಟನೆಗಳಲ್ಲಿ ತೊಡಗಿಸಿಕೊಂಡರೆ ಸಾಕು ಈ ಕಾಂಗ್ರೆಸಿಗರ ಕಣ್ಣು ಕೆಂಪಗಾಗುತ್ತದೆ. ಇದೀಗ ಚುನಾವಣಾ ಸಂದರ್ಭದಲ್ಲಂತೂ ಕೆಂಡಕಾರುತ್ತಿರುವ ಕಾಂಗ್ರೆಸ್ ಐಟಿ ಸೆಲ್‌ಗಳು ಹಿಂದೂಗಳನ್ನು ಮಣಿಸಲು ತಂತ್ರ ರೂಪಿಸಿದೆ. ಆದರೆ ಕಾಂಗ್ರೆಸ್ ಯಾವ ಕುತಂತ್ರಿ ನೀತಿಗೂ ಜಗ್ಗದ ಹಿಂದೂ ಕಾರ್ಯಕರ್ತರು ತಮ್ಮ ಧರ್ಮ ಕಾರ್ಯವನ್ನು ಮುಂದುವರಿಸಿಕೊಂಡಿದ್ದಾರೆ.. ಮಾಹಿತಿ:ಮಹೇಶ್ ಉಗ್ರಾಣಿಮನೆ.

  • 913
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari